ವಿಜಯಪುರ: ನಗರದಭೂತನಾಳ ಕೆರೆ ಬಳಿ ಇರುವ ಗಂಟೆ ಆಂಜನೇಯ ಜೈ ಹನುಮಾನ ದೇವಸ್ಥಾನ ಸಮಿತಿಯಿಂದ 201 ಸಸಿಗಳನ್ನು ನೆಡಲಾಯಿತು.
ಸಸಿ ನೆಟ್ಟುಆಶೀರ್ವಚನ ನೀಡಿದಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ನಮ್ಮ ಸುತ್ತಮುತ್ತ ಗಿಡಮರಗಳಿಂದ ಕೂಡಿದ ಪರಿಸರ ಅವಶ್ಯಕವಾಗಿದೆ. ಸದ್ಯದ ಕಾಲಘಟ್ಟದಲ್ಲಿ ಮನುಷ್ಯನಿಗೆ ಶುದ್ಧ ಗಾಳಿ ಸಿಗುತ್ತಿಲ್ಲ. ಆದ ಕಾರಣ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಶುದ್ಧ ಗಾಳಿ ದೊರೆಯುವಂತೆ ಮಾಡಬೇಕಾದ ಅಗತ್ಯ ಇದೆ ಎಂದರು.
ವಾಹನ ದಟ್ಟನೆ ಹಾಗೂ ಕಾರ್ಖಾನೆಗಳಿಂದಾಗಿಪರಿಸರ ಹಾಳಾಗುತ್ತಿದೆ. ಪರಿಸರ ವಿನಾಶದತ್ತ ದಾಪುಗಾಲಿಡುತ್ತಿದೆ. ಆದ್ದರಿಂದ ನಾವೆಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು ಸುಂದರ ಪರಿಸರ ನಿರ್ಮಾಣದತ್ತ ಸಾಗಬೇಕಾಗಿದೆ ಎಂದರು.
ಬಸವಲಿಂಗ ಸ್ವಾಮೀಜಿ, ರಾಮನಗೌಡ ಪಾಟೀಲ, ಅಭಿನವ ದೇವಾನಂದ ಚವ್ಹಾಣ, ರಾಮಚಂದ್ರ ಬಿ. ಚವ್ಹಾಣ, ಹುನ್ನು ಶಂಕರ ನಾಯಕ, ಕಾಸು ಹಾಮು ನಾಯಕ, ಮುನ್ನು ಲಚ್ಚು ಡಾವ್, ಭೀಮು ರಾಮು ಡಾವ್, ದಾಮಲು ಪುನ್ನು ಕಾರಭಾರಿ, ಮೋಹನ ಕುಬ್ಬು ಕಾರಬಾರಿ, ರಮೇಶ ಲಚ್ಚು ಚವ್ಹಾಣ, ಅಶೋಕ ಸೇವು ಚವ್ಹಾಣ, ದೇವು ಕೇಸು ಚವ್ಹಾಣ,ರಾಮಚಂದ್ರ ಬಿ. ಚವ್ಹಾಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.