ಆಲಮಟ್ಟಿ: ಸಂಕನಾಳ ಶಾಖಾ ಕಾಲುವೆಯ ವಿತರಣಾ ಕಾಲುವೆಯ ಬಾಕಿ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಇಲ್ಲಿನ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಹೋರಾಟವು ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.
ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ‘ನಮ್ಮ ಹೋರಾಟ ಗಮನಿಸಿ ವಿತರಣಾ ಕಾಲುವೆಯ ಕಾಮಗಾರಿ ಸಂಬಂಧಿತ ಕಡತಗಳಿಗೆ ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕರು ಸಹಿ ಮಾಡಿ, ಆದೇಶ ಹೊರಡಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆದರೂ, ಹೋರಾಟ ಹಿಂಪಡೆಯಲು ಸಾಧ್ಯವಿಲ್ಲ. ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿಗೆ ಚಾಲನೆ ನೀಡಿದರಷ್ಟೇ ಆಹೋರಾತ್ರಿ ಧರಣಿ ಕೊನೆಗೊಳಿಸುತ್ತೇವೆ’ ಎಂದರು.
ಹೋರಾಟ ನಡೆಸಿದ ಸ್ಥಳದಲ್ಲೇ ಧರಣಿನಿರತರು ಒಲೆ ಹಚ್ಚಿ ಅಡುಗೆ ತಯಾರಿಸಿ, ಊಟ ಮಾಡಿದರು.
ಉಮೇಶ ವಾಲಿಕಾರ, ಮೋಹನಗೌಡ ಪಾಟೀಲ, ಹಣಮಂತ ಕುಲಬುರ್ಕಿ, ಸೋಮೇಶ ನಾಗರೆಡ್ಡಿ, ಆನಂದ ನಾಗರೆಡ್ಡಿ, ಮಾರುತಿ ಹೂಗಾರ, ಶೇಖಪ್ಪ ಹೋಸುರ, ಯಮನಪ್ಪ ಧರ‍್ಮಗಿರಿ, ವಾಯ್.ಪಿ.ರ‍್ಮಗಿರಿ, ರವಿ ಧರ‍್ಮಗಿರಿ, ಅಶೋಕ ಹಚಡದ, ಶಿವಪ್ಪ ವಾಲಿಕಾರ, ಮಲಿಗೆಪ್ಪ ನಾಟೀಕಾರ, ಶಂಕರಗೌಡ ಬಿರಾದಾರ, ಮೌಲಾ ಯಲಿಗಾರ, ಸೋಮರಾರಾಯ ಭಜಂತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.