ADVERTISEMENT

ಬೇಸಿಗೆಯಲ್ಲೂ ನೀರಿನ ಕೊರತೆ ಇಲ್ಲ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 13:50 IST
Last Updated 31 ಮಾರ್ಚ್ 2021, 13:50 IST
ಹಂಚಿನಾಳ ಪಿ.ಎಚ್. ಗ್ರಾಮದಲ್ಲಿ ಪಿವಿಸಿ ಪೈಪ್ ವಿತರಣಾ ಸಮಾರಂಭದಲ್ಲಿ ಶಾಸಕ ಎಂ.ಬಿ.ಪಾಟೀಲ್ ಮಾತನಾಡಿದರು
ಹಂಚಿನಾಳ ಪಿ.ಎಚ್. ಗ್ರಾಮದಲ್ಲಿ ಪಿವಿಸಿ ಪೈಪ್ ವಿತರಣಾ ಸಮಾರಂಭದಲ್ಲಿ ಶಾಸಕ ಎಂ.ಬಿ.ಪಾಟೀಲ್ ಮಾತನಾಡಿದರು   

ವಿಜಯಪುರ: ಜಿಲ್ಲೆಯಲ್ಲಿ ನೀರಾವರಿಗೆ ಒಳಪಟ್ಟಿದ್ದರಿಂದ ಬೇಸಿಗೆ ಸಮಯದಲ್ಲೂ ನೀರಿನ ಕೊರತೆ ಇಲ್ಲದಂತಾಗಿದ್ದು, ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ ಎಂದುಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ರೈತ ಸಂಘ ಮತ್ತು ವರ್ಲ್ಡ್‌ ವಿಜನ್ ಇಂಡಿಯಾ ಸಹಯೋಗದಲ್ಲಿ ಹಂಚಿನಾಳ ಪಿ.ಎಚ್ ಗ್ರಾಮದಲ್ಲಿ ಪಿವಿಸಿ ಪೈಪ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವರ್ಲ್ಡ್‌ ವಿಜನ್ ಸಂಸ್ಥೆ ಬಡರೈತರಿಗೆ ಪಿವಿಸಿ ಪೈಪ್ ಉಚಿತವಾಗಿ ನೀಡುತ್ತಿರುವುದು ಅಭಿನಂದನಾರ್ಹವಾದದ್ದು. ರೈತರು ತಮ್ಮ ಜಮೀನಿನಲ್ಲಿ ಹೆಚ್ಚು-ಹೆಚ್ಚು ಬೆಳೆಗಳನ್ನು ಬೆಳೆದು ತಮ್ಮ ಹಾಗೂ ಮಕ್ಕಳ ಶಿಕ್ಷಣ, ಮೂಲ ಸೌಲಭ್ಯಗಳನ್ನು ಹೊಂದಲು ಸಾಧ್ಯ ಎಂದರು.

ADVERTISEMENT

ವರ್ಲ್ಡ್‌ ವಿಜನ್ ಸಂಸ್ಥೆ ವ್ಯವಸ್ಥಾಪಕ ಸುನಂದ ಎಸ್.ಮಾತನಾಡಿ, ಅತ್ಯಂತ ಕಡಿಮೆ ಜಮೀನನ್ನು ಹೊಂದಿದ ರೈತರಿಗೆ ನಮ್ಮ ಸಂಸ್ಥೆಯಿಂದ ರೈತರು ಬೆಳೆಯಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ರೈತರ ಹಾಗೂ ಅವರ ಮಕ್ಕಳ ಅಭಿವೃದ್ಧಿಯೇ ನಮ್ಮ ಸಂಸ್ಥೆಯ ಗುರಿ ಎಂದರು.

ವರ್ಲ್ಡ್ ವಿಷನ್ ಸಂಸ್ಥೆ ಬಸವರಾಜ ಎಸ್, ಸುಮಲತಾ ಬಂಡಾರೆ, ಬಂಜಾರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಎಲ್.ಚವ್ಹಾಣ, ಸಂಗು ಸಜ್ಜನ, ಅಶೋಕ ಪಾಟೀಲ, ಪದ್ದು ಚವ್ಹಾಣ, ಗುರು ಸಜ್ಜನ, ಕಾಂತು ರಾಠೋಡ, ನಿಂಗು ಸಜ್ಜನ, ಜತ್ತು ಕರಿಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.