ADVERTISEMENT

ಕೊಲ್ಹಾರ | ಸಂಕಷ್ಟದಲ್ಲಿದ್ದವರಿಗೆ ಎನ್‌ಟಿಪಿಸಿ ಸಹಾಯಹಸ್ತ

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯಡಿ ₹35 ಲಕ್ಷ ಆರ್ಥಿಕ ನೆರವು

ಬಸವರಾಜ ಎಸ್.ಉಳ್ಳಾಗಡ್ಡಿ
Published 17 ಮೇ 2020, 20:00 IST
Last Updated 17 ಮೇ 2020, 20:00 IST
ಎನ್ ಟಿಪಿಸಿಯ ಸಿಐಎಸ್ಎಫ್ ಸಿಬ್ಬಂದಿ ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಿದರು
ಎನ್ ಟಿಪಿಸಿಯ ಸಿಐಎಸ್ಎಫ್ ಸಿಬ್ಬಂದಿ ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಿದರು   

ಕೊಲ್ಹಾರ: ಕೊರೊನಾಲಾಕ್ ಡೌನ್ಸಂದಿಗ್ಧತೆಯಲ್ಲಿ ಕೂಡಗಿ ಎನ್‌ಟಿಪಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ₹35 ಲಕ್ಷ ಆರ್ಥಿಕ ನೆರವಿನಹಸ್ತ ಚಾಚಿದೆ.

ಕಳೆದ ಎರಡುತಿಂಗಳಿಂದ ದೇಶದಲ್ಲಿಲಾಕ್ ಡೌನ್ಜಾರಿಯಾದ ಪರಿಣಾಮ ವಿದ್ಯುತ್ ಬೇಡಿಕೆ ಬಾರದ ಹಿನ್ನೆಲೆ ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ತನ್ನ ವಿದ್ಯುತ್ ಉತ್ಪಾದನಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೂ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿಹಿಡಿದಿದೆ.

ವಿಜಯಪುರ ನಗರದ ಕಂಟೈನ್ಮೆಂಟ್ ಪ್ರದೇಶದಲ್ಲಿರುವ ಸುಮಾರು 3,500 ಕುಟುಂಬಗಳಿಗೆ ಲಾಕ್ ಡೌನ್ ಅವಧಿಯವರೆಗೂ ಪ್ರತಿದಿನ ಹಾಲು ಹಾಗೂ ಆಹಾರ ಸಾಮಾಗ್ರಿಗಳು ಪೂರೈಸಲು ಜಿಲ್ಲಾಡಳಿತಕ್ಕೆ ಸುಮಾರು ₹15 ಲಕ್ಷ ಆರ್ಥಿಕ ನೆರವು ನೀಡಿದೆ. ಲಾಕ್ ಡೌನ್ ವೇಳೆ ಜಿಲ್ಲೆಗೆ ಬಂದಿದ್ದ ಸುಮಾರುಮೂರುಸಾವಿರ ವಲಸೆ ಕಾರ್ಮಿಕರಿಗೆ ಸರ್ಕಾರಿ ಶಿಬಿರಗಳಲ್ಲಿ ಆಹಾರದ ವ್ಯವಸ್ಥೆ ಕಲ್ಪಿಸಲು ₹10 ಲಕ್ಷ ನೀಡುವುದಾಗಿ ಜಿಲ್ಲಾಧಿಕಾರಿಗಳಿಗೆ ಒಪ್ಪಿಗೆ ನೀಡಿ, ಯಾವುದೇ ಸಂದರ್ಭದಲ್ಲಿಹಣ ಬಳಸಿಕೊಳ್ಳಲು ತಿಳಿಸಿದೆ.

ADVERTISEMENT

ಅಲ್ಲದೇಬೆಂಗಳೂರಿನಲ್ಲಿರುವ ಸ್ಲಂ ನಿವಾಸಿಗಳಿಗೆ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ಇತರೆ ಸಾಮಾಗ್ರಿಗಳನ್ನುಪೂರೈಸಲು ಬೆಂಗಳೂರು ಮೂಲದ ಎಐಎಫ್ಒ ಇಂಡಿಯಾ ಸರ್ಕಾರೇತರ ಸಂಸ್ಥೆಯ ಮೂಲಕ ₹5 ಲಕ್ಷ ಖರ್ಚು ಮಾಡಿದೆ.

ಕೂಡಗಿ ವ್ಯಾಪ್ತಿಯ ತನ್ನ ಘಟಕದಲ್ಲಿರುವ ಸಾವಿರಕ್ಕೂಹೆಚ್ಚುಗುತ್ತಿಗೆ ಕಾರ್ಮಿಕರಿಗೆ ಪ್ರತಿದಿನ ಆಹಾರ ವ್ಯವಸ್ಥೆ ಕಲ್ಪಿಸಿದೆ. ಸುರಕ್ಷತಾ ದೃಷ್ಟಿಯಿಂದ ಸ್ಥಾವರದಲ್ಲಿ ಕರ್ತವ್ಯ ನಿರ್ವಹಿಸುವ ಸಿಐಎಸ್ಎಫ್ ಸಿಬ್ಬಂದಿ, ನೌಕರರು, ಗುತ್ತಿಗೆ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ,ಎನ್ ಟಿಪಿಸಿಯಮಹಿಳಾ ಕ್ಲಬ್ ಮೂಲಕ ಸುಮಾರು 8,650 ಮಾಸ್ಕ್ ಗಳನ್ನು ತಯಾರಿಸಿ ವಿತರಿಸಿದೆ. ಸ್ಥಾವರದೊಳಗೆ, ಟೌನ್ ಶಿಪ್ ನಲ್ಲಿ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಮತ್ತು ಸುತ್ತಲಿನ ತೆಲಗಿ, ಕೂಡಗಿ, ಮಸೂತಿ ಹಾಗೂ ಗೊಳಸಂಗಿ ಗ್ರಾಮಗಳಲ್ಲಿ ಸಿಐಎಸ್ಎಫ್ ಸಿಬ್ಬಂದಿ ಸಹಾಯದೊಂದಿಗೆ ಸುಮಾರು 30 ಸಾವಿರ ಲೀಟರ್ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಲಾಗಿದೆ.

ಘಟಕದಲ್ಲಿ ಈ ಎಲ್ಲಾ ಸುರಕ್ಷತಾ ಕಾರ್ಯಗಳಿಗಾಗಿ ಸುಮಾರು ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ಎನ್ ಟಿಪಿಸಿ ಎಚ್ ಆರ್ ವಿಭಾಗದ ಎಜಿಎಂ ವಿ.ಜಯನಾರಾಯಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

*
ಸಾಮಾಜಿಕ ಹೊಣೆಗಾರಿಕೆ ಯನ್ನು ಮೊದಲಿನಿಂದಲೂ ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದೆ. ಗ್ರಾಮಗಳಲ್ಲಿ ಸುರಕ್ಷತಾ ಕಾರ್ಯ ಮಾಡಲಾಗಿದೆ.
–ವಿ.ಜಯನಾರಾಯಣ್, ಎಜಿಎಂ, ಎಚ್.ಆರ್.ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.