ವಿಜಯಪುರ: ಕೊಲ್ಹಾರ ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ (ಎನ್‌ಟಿಪಿಸಿ) ಚಿಮಣಿಯಲ್ಲಿ ಮಂಗಳವಾರ ಸಂಜೆ ಕೇಬಲ್ ಅಳವಡಿಸುತ್ತಿದ್ದ ವೇಳೆ ಉತ್ತರಪ್ರದೇಶ ಗಾಜಿಪುರದ ಕಿಶನ್ ಕುಮಾರ್ ಭಾರದ್ವಾಜ್ (32) ಎಂಬ ಕಾರ್ಮಿಕ 130 ಅಡಿ ಎತ್ತರದಿಂದ ಆಯ ತಪ್ಪಿ ಕೆಳಗಡೆ ಬಿದ್ದು, ಸಾವನ್ನಪ್ಪಿದ್ದಾರೆ.
‘ಕಿಶನ್‌ಕುಮಾರ್ ಸಾವಿಗೆ ಎನ್‌ಟಿಪಿಸಿ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ. ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಎನ್‌ಟಿಪಿಸಿ ಸಂಸ್ಥೆಯ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.