ADVERTISEMENT

ಆನ್‍ಲೈನ್‌ನಲ್ಲಿ ಹಣ ವಂಚನೆ: ಮಹಿಳೆ ಬಂಧನ

ವಿಡಿಯೊ ಕಾಲ್‌ ಮಾಡಿ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಹಣ ದೋಚಿದ ದಂಪತಿ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:03 IST
Last Updated 1 ಡಿಸೆಂಬರ್ 2022, 16:03 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌   

ವಿಜಯಪುರ: ಆನ್‍ಲೈನ್ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಸಿಂದಗಿ ತಾಲ್ಲೂಕಿನ ಬಗಲೂರ ಗ್ರಾಮದ ಪರಮೇಶ್ವರ ಹಿಪ್ಪರಗಿ ಎಂಬುವವರಿಗೆ ಫೇಸ್‌ಬುಕ್‌ ಮೂಲಕ ಪರಿಚಯವಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಾಸರಹಳ್ಳಿ ಗ್ರಾಮದ ಮಹಿಳೆಮಂಜುಳಾ ಕೆ.ಆರ್.(30) ಎಂಬುವವರುತಾನು ಐಎಎಸ್ ಪಾಸ್ ಮಾಡಿದ್ದು, ಮುಂದೆ ಡಿ.ಸಿ. ಆಗುತ್ತೇನೆ, ನಿನ್ನನ್ನೆ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾಳೆ ಎಂದುಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಮೇಶ್ವರ ಅವರಿಗೆ ವಿಡಿಯೊ ಕಾಲ್‌ ಮಾಡಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಒತ್ತಾಯಿಸಿ ಅವನು ಸ್ನಾನ ಮಾಡುವಾಗ ವಿಡಿಯೊ ಕಾಲ್‍ನಸ್ಕ್ರಿನ್‍ಶಾಟ್ ಪಡೆದು, ಹಣ ಕೊಡು ಇಲ್ಲದಿದ್ದರೆ ನಿನ್ನ ಬೆತ್ತಲೆ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿಹರಿಬಿಟ್ಟು ನಿನ್ನ ಮಾನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಹೆದರಿಸಿದ್ದಾಳೆ ಎಂದರು.

ADVERTISEMENT

ಪರಮೇಶ್ವರನ ಕಡೆಯಿಂದ ₹39,04,870 ಅನ್ನು ತನ್ನ ಫೆಡೆರಲ್ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಆನಲೈನ್ ಮೂಲಕಮಂಜುಳಾವಂಚನೆ ಮಾಡಿದ್ದಳು ಎಂದು ತಿಳಿಸಿದರು.

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಶೇಷ ತನಿಖಾ ತಂಡವನ್ನುರಚನೆ ಮಾಡಲಾಗಿತ್ತು ಎಂದು ಹೇಳಿದರು.

ತನಿಖಾ ತಂಡವು ಆರೋಪಿತರ ಮೊಬೈಲ್ಲೊಕೇಶನ್ ಹಾಗೂ ಮೊಬೈಲ್ ಸಿಮ್ ಮಾಹಿತಿ ಹಾಗೂ ಬ್ಯಾಂಕ್ ಕೆ.ವೈ.ಸಿ. ಮಾಹಿತಿ ಕಲೆ ಹಾಕಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಆರೋಪಿ ಮಂಜುಳಾಗೆ ಸಹಕಾರ ನೀಡಿದ ಆಕೆಯ ಪತಿ ಸ್ವಾಮಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.

ಆಪಾದಿತ ಮಹಿಳೆ ಮತ್ತು ಅವಳ ಗಂಡ ಸ್ವಾಮಿ ಇಬ್ಬರೂ ಕೂಡಿಯೇಈ ರೀತಿ ಯೋಜನೆ ರೂಪಿಸಿ, ಆನಲೈನ್ ಮೂಲಕ ವಂಚನೆ ಮಾಡಿರುವುದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದರು.

ಆರೋಪಿಗಳು ವಂಚನೆ ಮಾಡಿ ಸಂಪಾದಿಸಿದ ಹಣದಲ್ಲಿ 100 ಗ್ರಾಂ ಬಂಗಾರದಆಭರಣಗಳನ್ನು, ಒಂದು ಸೆಕೆಂಡ್ ಹ್ಯಾಂಡ್ ಕಾರು ಹಾಗೂ ಬೈಕ್‌ ಖರೀದಿ ಮಾಡಿದ್ದಾರೆ ಎಂದರು.

ದಾಸರಹಳ್ಳಿ ಗ್ರಾಮದಲ್ಲಿ ಎರಡು ಅಂತಸ್ತಿನ ಐಷಾರಾಮಿಮನೆ ನಿರ್ಮಿಸುತ್ತಿದ್ದಾರೆ ಮತ್ತು ಆರೋಪಿ ಮಹಿಳೆಯು ತನ್ನ ಗಂಡನೊಂದಿಗೆ ಕೂಡಿ ‘ಸ್ವಾಮಿ ಫೈನಾನ್ಸ್’ ಎಂಬ ಹೆಸರಿನ ಫೈನಾನ್ಸ್ ಕಂಪನಿ ತೆರೆದು ಸಾರ್ವಜನಿಕರಿಗೆ ಸಾಲ ನೀಡಿದ್ದಾರೆ ಎಂದು ಹೇಳಿದರು.

ವಂಚನೆ ಹಣದಲ್ಲಿ ಖರೀದಿ ಮಾಡಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯ ಫೆಡೆರಲ್ ಬ್ಯಾಂಕ್ ಖಾತೆಯನ್ನು
ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಬ್ಯಾಂಕ್‌ ಖಾತೆಯಲ್ಲಿ ಇದ್ದ ₹ 6 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪ್ರಕರಣದಲ್ಲಿ ವಂಚನೆ ಮಾಡಿದ ಬಹುಪಾಲು ಹಣವನ್ನು ಹಾಗೂ ಬಂಗಾರದ ಆಭರಣಗಳನ್ನು ತೆಗೆದುಕೊಂಡು ತಲೆಮರೆಸಿಕೊಂಡು ಪರಾರಿಯಾಗಿರುವ ಸ್ವಾಮಿಯ ಬ್ಯಾಂಕ್ ಖಾತೆಗಳನ್ನುಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.