ಸಿಂದಗಿ: ‘ಪ್ರಜಾವಾಣಿ’ ದಿನಪತ್ರಿಕೆ ಮಾತ್ರವಾಗಿರದೇ ಇದೊಂದು ಜ್ಞಾನನಿಧಿಯಾಗಿದೆ. ವಸ್ತು ನಿಷ್ಠೆಗೆ ಇನ್ನೊಂದು ಹೆಸರೇ ಪ್ರಜಾವಾಣಿ. ವಿಶ್ವಾಸಾರ್ಹ ದಿನಪತ್ರಿಕೆ ಎಂದು ಸಮಸ್ತ ಕನ್ನಡಿಗರಿಂದ ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಏಕಮೇವ ಪತ್ರಿಕೆಯಾಗಿದೆ’ ಎಂದು ಕುವೆಂಪು ವಿದ್ಯಾಲಯ (ಸ್ಟಡಿ ಸರ್ಕಲ್) ದ ಮುಖ್ಯಸ್ಥ ಮಹೇಶ ದುತ್ತರಗಾವ ಹೇಳಿದರು.
ಪಟ್ಟಣದ ಕುವೆಂಪು ವಿದ್ಯಾಲಯ (ಸ್ಡಡಿ ಸರ್ಕಲ್)ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಮೀಕ್ಷಾ ಸಪ್ತಾಹದ ಉದ್ದೇಶ ಪತ್ರಿಕೆ ಓದುಗರ ಸಂಖ್ಯೆ ಹೆಚ್ಚಿಸಲು, ಪ್ರಚಾರಕ್ಕಾಗಿ ಅಲ್ಲ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಓದುವ ಹವ್ಯಾಸ ರೂಢಿಸಿಕೊಳ್ಳಲಿ. ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಪ್ರಚಲಿತ ವಿದ್ಯಮಾನಗಳ ನೈಜ ಸ್ಥಿತಿಗತಿ ಅರಿತುಕೊಳ್ಳಲಿ ಎಂಬ ಸದುದ್ದೇಶವಾಗಿದೆ. ಪತ್ರಿಕೆಯಲ್ಲಿನ ವಾಕ್ಯ ರಚನೆ, ವರದಿ ಶೈಲಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿ’ ಎಂದರು.
‘ಯಾವುದೇ ರಾಜಕೀಯ ಪ್ರಾಬಲ್ಯ, ಆಮಿಷಗಳಿಗೆ ಒಳಗಾಗದೇ ಸಾಮಾಜಿಕ ಕಳಕಳಿ, ಮಾನವೀಯ ವರದಿಗೆ ಹೆಸರುವಾಸಿಯಾದ ಪತ್ರಿಕೆಯಾಗಿದೆ. ನಿದ್ರಿಸುವ ಸರ್ಕಾರ, ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ನಿರಂತರವಾಗಿ ಮುಂದುವರೆಸಿಕೊಂಡು ಬಂದಿದೆ’ ಎಂದರು.
ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಗಳ ಪ್ರಸರಣ ವಿಭಾಗದ ವ್ಯವಸ್ಥಾಪಕ ಶ್ರೀಶೈಲ ಬಿದರಿ ಸಪ್ತಾಹದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ಕಾವೇರಿ ನಾಯ್ಕೋಡಿ, ಶಕುಂತಲಾ ಪಾಟೀಲ, ಭಾಗ್ಯಶ್ರೀ ಕಕ್ಕಳಮೇಲಿ ಸಮಾರಂಭದ ನಿರ್ವಹಣೆ ಮಾಡಿದರು. ಪುಟಾಣಿ ವೇದಾಂತ ವಚನಗಾಯನ ಗಮನ ಸೆಳೆಯಿತು.
ಪದ್ಮರಾಜ ಮಹಿಳಾ ಪದವಿ ಕಾಲೇಜಿನಲ್ಲಿ ಪಿಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತ್ಯೇಕವಾಗಿ ಮೂರು ಕಾಲೇಜುಗಳಲ್ಲಿ ‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹ ಪ್ರಾರಂಭಗೊಂಡಿತು.
ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಹೆಚ್ಚಿಸಲು ‘ಪ್ರಜಾವಾಣಿ’ ಪತ್ರಿಕೆಯನ್ನು ₹4ರಂತೆ ರಿಯಾಯತಿ ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕುಶ್ರೀಶೈಲ ಬಿದರಿ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪ್ರಸರಣ ವಿಭಾಗದ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.