ADVERTISEMENT

ವಾರಾಂತ್ಯ ಕರ್ಫ್ಯೂ ತೆರವಿಗೆ ಆಗ್ರಹ

ವಿಜಯಪುರ ಮರ್ಚಂಟ್ಸ್‌ ಅಸೋಸಿಯೇಶನ್‌ನಿಂದ ಸಚಿವೆ ಜೊಲ್ಲೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 14:54 IST
Last Updated 12 ಜನವರಿ 2022, 14:54 IST
ವಿಜಯಪುರ ಜಿಲ್ಲೆಯಾದ್ಯಂತ ವಿಧಿಸಿರುವ ವಾರಾಂತ್ಯ ಕರ್ಫ್ಯೂ ತೆರವುಗೊಳಿಸುವಂತೆ ಒತ್ತಾಯಿಸಿ ಮರ್ಚಂಟ್ಸ್‌ ಅಸೋಸಿಯೇಶನ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು
ವಿಜಯಪುರ ಜಿಲ್ಲೆಯಾದ್ಯಂತ ವಿಧಿಸಿರುವ ವಾರಾಂತ್ಯ ಕರ್ಫ್ಯೂ ತೆರವುಗೊಳಿಸುವಂತೆ ಒತ್ತಾಯಿಸಿ ಮರ್ಚಂಟ್ಸ್‌ ಅಸೋಸಿಯೇಶನ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು   

ವಿಜಯಪುರ: ಜಿಲ್ಲೆಯಾದ್ಯಂತ ವಿಧಿಸಿರುವ ವಾರಾಂತ್ಯ ಕರ್ಫ್ಯೂ ತೆರವುಗೊಳಿಸುವಂತೆ ಒತ್ತಾಯಿಸಿವಿಜಯಪುರ ಮರ್ಚಂಟ್ಸ್‌ ಅಸೋಸಿಯೇಶನ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ವ್ಯಾಪಾರ, ವಹಿವಾಟು ಇಲ್ಲದೇ ಈಗಾಗಲೇ ಜಿಲ್ಲೆಯ ವ್ಯಾಪಾರಸ್ಥರು ಆರ್ಥಿಕವಾಗಿ, ಮಾನಸಿಕವಾಗಿ ತತ್ತರಿಸಿದ್ದಾರೆ. ಈ ಹಿಂದೆ ವಿಧಿಸಲಾಗಿದ್ದಎರಡು ಲಾಕ್‌ಡೌನ್‌ನಿಂದ ಕಳೆದ ಎರಡು ವರ್ಷಗಳಿಂದ ವ್ಯಾಪಾರ, ವಹಿವಾಟು ಕಳೆದುಕೊಂಡು ಆರ್ಥಿಕವಾಗಿ ಇನ್ನೂ ಚೇತರಿಕೆಯಾಗದ ದುಸ್ಥಿತಿ ಬಂದಿದೆ ಎಂದು ಹೇಳಿದರು.

ನಿಶ್ಚಿತ ವೆಚ್ಚಗಳಾದ ಅಂಗಡಿ ಬಾಡಿಗೆ, ನೌಕರರ ಸಂಬಳ, ವಿದ್ಯುತ್‌ ಬಿಲ್, ಮನೆಯ ಹಾಗೂ ಇನ್ನಿತರ ವೆಚ್ಚಗಳನ್ನು ಯಾವುದೇ ಆದಾಯವಿಲ್ಲದೆ ಭರಿಸುವ ಪರಿಸ್ಥಿತಿ ಬಂದೊದಗಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದ್ದು, ಸೋಂಕಿನ ಹಾಗೂ ಸಾವಿನ ಪ್ರಮಾಣ ಹೆಚ್ಚಿರುವದಿಲ್ಲ ಎಂದು ಸಂಘದ ಅಧ್ಯಕ್ಷ ರವೀಂದ್ರ ಎಸ್.ಬಿಜ್ಜರಗಿ ಹೇಳಿದರು.

ವ್ಯಾಪಾರಸ್ಥರ ದಯನೀಯ ಪರಿಸ್ಥಿತಿ ಪರಿಶೀಲಿಸಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂನಿಂದ ವಿನಾಯ್ತಿ ನೀಡಲು ಮರ್ಚಂಟ್ಸ್‌ ಅಸೋಸಿಯೇಶನ್, ಹೋಲ್‌ಸೇಲ್ ಕಿರಾಣ ಮರ್ಚಂಟ್ಸ್‌, ಆಯಿಲ್ ಮಿಲ್ ಮಾಲೀಕರು, ಮಷನರಿ ಮರ್ಚಂಟ್ಸ್‌, ಸ್ಟೇಷನರಿ, ಎಲ್.ಬಿ.ಎಸ್ ಮಾರುಕಟ್ಟೆ ಸಂಕಿರ್ಣ, ನೆಹರು ಮಾರುಕಟ್ಟೆ ಸಂಕೀರ್ಣ, ಜವಳಿ ವ್ಯಾಪಾರಸ್ಥರು, ಸರಾಫ್‌ ವ್ಯಾಪಾರಸ್ಥರು, ಫುಟ್‌ವೇರ್‌, ರೆಡಿಮೇಡ್‌ ಬಟ್ಟೆ ವ್ಯಾಪಾರಸ್ಥರು, ಹೋಟೆಲ್‌ ಮಾಲೀಕರು, ಹಾರ್ಡ್‌ವೇರ್‌, ಧಾನ್ಯಕಾಳುಗಳ ಬಜಾರ್‌, ಬಾಂಡೆ ಮರ್ಚಂಟ್ಸ್‌ ಅಸೋಸಿಯೇಶನ್‌ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.