ADVERTISEMENT

ವಿಜಯಪುರ | ಸಂಕ್ರಾಂತಿ; ಮಕ್ಕಳಿಗೆ ಹಬ್ಬದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:54 IST
Last Updated 15 ಜನವರಿ 2026, 2:54 IST
ವಿಜಯಪುರದ ವೇದ ಅಕಾಡೆಮಿಯಲ್ಲಿ ಬುಧವಾರ ಮಕರ ಸಂಕ್ರಾಂತಿ ಆಚರಿಸಲಾಯಿತು
ವಿಜಯಪುರದ ವೇದ ಅಕಾಡೆಮಿಯಲ್ಲಿ ಬುಧವಾರ ಮಕರ ಸಂಕ್ರಾಂತಿ ಆಚರಿಸಲಾಯಿತು   

ವಿಜಯಪುರ: ಇಲ್ಲಿನ ವೇದ ಅಕಾಡೆಮಿಯಲ್ಲಿ ಬುಧವಾರ ಮಕರ ಸಂಗ್ರಮಣ ಹಬ್ಬದ ಆಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ತಿಳಿಸಲಾಯಿತು.

ವಿವಿಧ ರಾಜ್ಯಗಳ ಸಂಸ್ಕೃತಿ ಪ್ರತಿಬಿಂಬಿಸುವ ವೇಷದಲ್ಲಿ ಮಕ್ಕಳು ಕಂಗೊಳಿಸಿದರು. ಕಬ್ಬು, ಕಡಲೆ, ತರಕಾರಿಗಳು ಮತ್ತು ಹೂಗಳಿಂದ ಅಲಂಕೃತಗೊಂಡ ಫಲಪುಷ್ಪ ಪ್ರದರ್ಶನ ಗಮನಸೆಳೆಯಿತು.

ವೇದ ಅಕಾಡೆಮಿ ನಿರ್ದೇಶಕಿ ಶಿವಲೀಲಾ ಕೆಲೂರ ಮಾತನಾಡಿ, ‘ಭಾರತದ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ವಿಶೇಷವಾಗಿದೆ. ಚಳಿಗಾಲ ಮುಗಿದು, ಬೇಸಿಗೆಯ ಮುನ್ಸೂಚನೆ ನೀಡುವ ಮೂಲಕ ಋತುವಿನ ಬದಲಾವಣೆಯನ್ನು ಈ ಹಬ್ಬ ಸೂಚಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಸಂಕ್ರಾಂತಿ ಆಚರಿಸಲಾಗುತ್ತದೆ. ರೈತರಿಗೆ ಇದು ಸುಗ್ಗಿ ಹಬ್ಬವಾಗಿದೆ’ ಎಂದು ವಿವರಿಸಿದರು.

ADVERTISEMENT

ಪ್ರಾಂಶುಪಾಲ ಮಧ್ವಪ್ರಸಾದ ಜಿ.ಕೆ., ಮುಖ್ಯಶಿಕ್ಷಕಿ ರಶ್ಮಿ ಕವಟಗಿಮಠ, ಅಂಬುಜಾ ದೇಶಪಾಂಡೆ, ರೋಹಿಣಿ ಮಾನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.