ADVERTISEMENT

ಶಾಲೆಗಳಿಗೆ ಡಿ ದರ್ಜೆ ನೌಕರರ ಒದಗಿಸಲು ಒತ್ತಾಯ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯ ಘಟಕದ ಅಧ್ಯಕ್ಷರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:10 IST
Last Updated 29 ಜುಲೈ 2025, 4:10 IST
ನಿಡಗುಂದಿ ಪಟ್ಟಣದಲ್ಲಿ ತಾಲ್ಲೂಕು ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ನೂತನ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರನ್ನು ಸನ್ಮಾನಿಸಲಾಯಿತು
ನಿಡಗುಂದಿ ಪಟ್ಟಣದಲ್ಲಿ ತಾಲ್ಲೂಕು ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ನೂತನ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರನ್ನು ಸನ್ಮಾನಿಸಲಾಯಿತು   

ನಿಡಗುಂದಿ : ವಾರಕ್ಕೆ 6 ದಿನ ಮೊಟ್ಟೆ ಕೊಡುವ ಬದಲು 3 ದಿನ ಮೊಟ್ಟೆ ಕೊಟ್ಟು, ಉಳಿದ ಹಣದಲ್ಲಿ ಶಾಲೆಗಳಿಗೆ ಡಿ ಗ್ರೂಪ್ ನೌಕರರನ್ನು ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಿಡಗುಂದಿ ತಾಲ್ಲೂಕು ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಆಯಾ ಸ್ಥಳೀಯ ಆಡಳಿತಕ್ಕೆ ಸರ್ಕಾರಿ ಶಾಲೆಯ ಶೌಚಾಲಯ ನಿರ್ವಹಣೆ, ಕೊಠಡಿಗಳ ದುರಸ್ತಿ ಜವಾಬ್ದಾರಿ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಶಿಕ್ಷಕರ ಬಹು ಬೇಡಿಕೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿಯ ಸಮಸ್ಯೆಯನ್ನು  ಸೆ.5ರ ಶಿಕ್ಷಕರ ದಿನಾಚರಣೆಯೊಳಗೆ ಬಗೆಹರಿಸಲಾಗುವುದು, 58 ಸಾವಿರ ಪದವೀಧರ ಪಿ.ಎಸ್.ಟಿ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡುವಿಕೆ, ಎಲ್.ಬಿ.ಎ (ಪಠ್ಯ ಆಧಾರಿತ ಚಟುವಟಿಕೆ) ಯಲ್ಲಿನ ಘಟಕ ಪರೀಕ್ಷಾ ಅಂಕ ಕಡಿಮೆ ಮಾಡುವುದು, ಎಲ್‌ಬಿಎ ಹೊರತುಪಡಿಸಿ ಇನ್ನಿತರ ಪರೀಕ್ಷೆ ರದ್ದುಗೊಳಿಸುವುದು, ನಲಿಕಲಿ ವ್ಯವಸ್ಥೆ ರದ್ದುಗೊಳಿಸುವುದು, ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಗಳಿಗೂ 6 ನೋಟ್ ಬುಕ್ ವಿತರಣೆಗೆ ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ADVERTISEMENT

ಇನ್ಫೋಸಿಸ್ ವತಿಯಿಂದ ನಿಡಗುಂದಿ ತಾಲ್ಲೂಕಿನ ಪ್ರತಿ ಶಾಲೆಗೂ ಕಂಪ್ಯೂಟರ್ ನೀಡಲಾಗಿದೆ. ಮುಂದಿನ ಹಂತದಲ್ಲಿ ಪ್ರತಿಶಾಲೆಗೂ ಸ್ಮಾರ್ಟ್ ಕ್ಲಾಸ್ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಶಿಕ್ಷಕ ಬಸವರಾಜ ಹಂಚಲಿ, ಶಿಕ್ಷಕ ಸಂಘಟನೆಯ ವಿವಿಧ ಜಿಲ್ಲೆಯ ಮುಖಂಡರಾದ ಬಸವರಾಜ ಬಾಗೇನವರ, ಅರ್ಜುನ ಲಮಾಣಿ, ಎಸ್. ಎಂ. ಲೋಕಣ್ಣವರ, ಜಿ.ಎಂ. ಹಿರೇಮಠ, ಮಾಗಡಿ ಮೂರ್ತಿ ಮಾತನಾಡಿ, ಚಂದ್ರಶೇಖರ ನುಗ್ಗಲಿ ಶಿಕ್ಷಕರ ಪರ ಕೈಗೊಂಡ ವಿವಿಧ ಕಾರ್ಯಗಳನ್ನು, ಸಂಘಟನಾ ಶೈಲಿಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಗೌಡರ, ಶಮಷಾದಬೇಗಂ ಕನಕಗಿರಿ, ಶಿವಾನಂದ ಮುಚ್ಚಂಡಿ, ಉಮೇಶ ಕೌಲಗಿ, ಎಂ.ಎ.ಮುಲ್ಲಾ, ಎಂ.ಎಸ್.ಮುಕಾರ್ತಿಹಾಳ, ಸಲೀಂ ದಡೇದ, ಚಂದ್ರಶೇಖರ ಕೋಳೇಕರ, ಮಹೇಶ ಗಾಳಪ್ಪಗೋಳ, ಕರಿಯಪ್ಪ ಸಿಂದಗಿ, ಹನುಮಂತ ಮಾಳಗೊಂಡ ಇದ್ದರು.

ಬೈಕ್ ರ‍್ಯಾಲಿ: ನಿಡಗುಂದಿ ಬಸ್ ನಿಲ್ದಾಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಜರುಗಿತು. ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ವತಿಯಿಂದ ಚಂದ್ರಶೇಖರ ನುಗ್ಗಲಿ ಅವರಿಗೆ ಬೆಳ್ಳಿಯ ಗಧೆ ನೀಡಿ ಸನ್ಮಾನಿಸಲಾಯಿತು. ವಿಜಯಪುರ ಬಾಗಲಕೋಟೆ ಚಿಕ್ಕೋಡಿ ಯಾದಗಿರಿ ಬೆಳಗಾವಿ ಕೊಪ್ಪಳ ಜಿಲ್ಲೆಯಿಂದ ಶಿಕ್ಷಕರು ಆಗಮಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.