ADVERTISEMENT

ನಾಲತವಾಡ: ಸರಣಿ ಕಳವು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:06 IST
Last Updated 27 ಆಗಸ್ಟ್ 2024, 16:06 IST
ನಾಲತವಾಡ ಪಟ್ಟಣದ ಚನ್ನಬಸಪ್ಪ ಗುರಿಕಾರ ಅವರ ಮನೆಯ ಬೀರು ಒಡೆದಿರುವ ದೃಶ್ಯ.
ನಾಲತವಾಡ ಪಟ್ಟಣದ ಚನ್ನಬಸಪ್ಪ ಗುರಿಕಾರ ಅವರ ಮನೆಯ ಬೀರು ಒಡೆದಿರುವ ದೃಶ್ಯ.   

ನಾಲತವಾಡ: ಪಟ್ಟಣದಲ್ಲಿ ಸೋಮವಾರ ರಾತ್ರಿ ಸರಣಿ ಕಳ್ಳತನವಾಗಿದ್ದು, 2 ತೊಲಿ ಬಂಗಾರ ಹಾಗೂ ₹ 20 ಸಾವಿರ ನಗದು ಕಳ್ಳತನವಾಗಿದೆ.

ಸೋಮವಾರ ರಾತ್ರಿ ನಾಲ್ಕು ಮನೆಗಳ ಬೀಗ ಮುರಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ನಾಡಗೌಡ ಓಣಿಯ ನಿವಾಸಿ ಚನ್ನಬಸಪ್ಪ ಗುರಿಕಾರ ಎಂಬವರ ಮನೆಗೆ ನುಗ್ಗಿದ ಕಳ್ಳರು, ಬೀರು ಒಡೆದು ಸುಮಾರು ₹ 20 ಸಾವಿರ ಹಾಗೂ 2 ತೊಲಿ ಬಂಗಾರವನ್ನು ಎಗರಿಸಿದ್ದಾರೆ. 

ಬಸವರಾಜ ಹಳಶೆಟ್ಟಿ ಅವರ ಮನೆಯ ಬಾಗಿಲು ಮುರಿದು ಮನೆಯ ತುಂಬ ಹುಡುಕಾಡಿದ್ದಾರೆ. ಆದರೆ, ಮನೆಯಲ್ಲಿ ಬಂಗಾರ ಹಾಗೂ ನಗದು ಹಣ ಇಲ್ಲದಿರುವುದನ್ನು ಮನಗಂಡು ಬೆಲೆಬಾಳುವ 2 ಸೀರೆಯನ್ನು ಹೊತ್ತೊಯ್ದಿದ್ದಾರೆ.

ADVERTISEMENT

ಗುರುಲಿಂಗಪ್ಪ ಕುಂಬಾರ ಹಾಗೂ ಅಬ್ದುಲ್‌ ಸಾಬ ಹಣಗಿ ಅವರ ಮನೆಯ ಬಾಗಿಲು ಮುರಿದು ಹೋಗಿದ್ದಾರೆ. ಆದರೆ, ಇವರ ಮನೆಯಲ್ಲಿ ಯಾವುದೇ ವಸ್ತುಗಳು ಕಳುವಾವಾಗಿಲ್ಲ ಎಂದು ತಿಳಿದು ಬಂದಿದೆ.

ಸರಣಿ ಕಳ್ಳತನವಾದ ಮನೆಗಳ ಪರಿಶೀಲನೆ ನಡೆಸಿದ ಪೋಲಿಸ್ ಸಿಬ್ಬಂದಿ

ಮುದ್ದೇಬಿಹಾಳ ಪೋಲೀಸ್ ಠಾಣೆಯ ಪಿಎಸ್ಐ ಮನ್ನಾಬಾಯಿ ನಾಯಕ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.