ADVERTISEMENT

ಶಾಂತಿ ಕುಟೀರ: ಜ್ಞಾನ ಸಪ್ತಾಹ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 10:54 IST
Last Updated 24 ಆಗಸ್ಟ್ 2022, 10:54 IST

ವಿಜಯಪುರ: ಸಂತ ಸಮರ್ಥ ಸದ್ಗುರು ಗಣಪತರಾವ್‌ ಮಹಾರಾಜರ ಜನ್ಮೋತ್ಸವ ಅಂಗವಾಗಿ ಆಗಸ್ಟ್‌ 25ರಿಂದ 31ರ ವರೆಗೆ ಕನ್ನೂರ ಗ್ರಾಮದ ‘ಶಾಂತಿಕುಟೀರ’ದಲ್ಲಿ ಜ್ಞಾನ ಸಪ್ತಾಹ ನಡೆಯಲಿದೆ.

ಏಳು ದಿನ ನಡೆಯುವ ಜನ್ಮೋತ್ಸವ ಸಪ್ತಾಹದಲ್ಲಿ ಆಧ್ಯಾತ್ಮಿಕ ಮಾರ್ಗದರ್ಶಕ ಪದ್ಮಭೂಷಣ ಎಂ. ಹೆಬ್ಬಳ್ಳಿಯ ಚೈತನ್ಯಾಶ್ರಮದ ದತ್ತಾವಧೂತರು, ಮಂಡ್ಯದ ಚಿನ್ಮಯಾ ಮಿಷನ್‌ನ ಸ್ವಾಮಿ ಆದಿತ್ಯಾನಂದ ಸರಸ್ವತಿ, ಬೆಂಗಳೂರಿನ ವಿವೇಕ ಸಬನೀಸ, ಆದಿಚುಂಚನಗಿರಿ ಶಾಖಾ ಮಠದ ಸಾಯಿ ಕೀರ್ತಿನಾಥ ಸ್ವಾಮೀಜಿ, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ, ಹುಬ್ಬಳ್ಳಿಯ ಆರ್ಷ ವಿದ್ಯಾಪೀಠದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮಿ, ಮುಂಬೈನ ಪ್ರೀತಿ ಸಂಪಗಾಂವಕರ, ಪುಣೆಯ ಅರುಣ ಕೇಳಕರ, ಆಳಂದಿಯ ಶಂಕರ ಶಾಸ್ತ್ರಿ, ಇಚಲಕರಂಜಿಯ ಮುರಳಿ ಜಾಜು, ಮಿರಜ್‌ನ ಸಮರ್ಥ ಭಕ್ತಕೌಸ್ತುಭ ಬುವಾ ರಾಮದಾಸಿ, ಖೋಪೋಲಿ ಚಿನ್ಮಯಾ ಮಿಷನ್ನಿನ ಸ್ವಾಮಿ ಮೇಧನಾನಂದ ಅವರು ತಮ್ಮ ಅನುಭವಾಮೃತವನ್ನು ಭಕ್ತರಿಗೆ ನೀಡಲಿದ್ದಾರೆ.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮತ್ತು ಅದಮ್ಯಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಭಾಗವಹಿಸಲಿದ್ದಾರೆ.

ADVERTISEMENT

ನಿತ್ಯ ಬೆಳಿಗ್ಗೆ ಕಾಕಡಾರತಿ, ಧ್ಯಾನ, ಸಾಂಪ್ರದಾಯಿಕ ಭಜನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆ.30ರಂದು ರಾತ್ರಿ ಜಾಗರಣೆಯಲ್ಲಿ ಕೀರ್ತನೆ ನಡೆಯುತ್ತದೆ.

ಸದ್ಗುರುಗಳ ಜನ್ಮೋತ್ಸವ ದಿನವಾದ ಆ.31ರಂದು ಜನ್ಮಸ್ಥಾನ ಕನ್ನೂರ ಗ್ರಾಮದಿಂದ ಶ್ರೀಕ್ಷೇತ್ರ ಶಾಂತಿಕುಟೀರದ ವರೆಗೆ ಪಲ್ಲಕ್ಕಿ ಉತ್ಸವ ಮತ್ತು ಮೆರವಣಿಗೆ ನಡೆಯಲಿದೆ ಎಂದುಶಾಂತಿ ಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದಲಾಲ ಬಾಹೇತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.