ADVERTISEMENT

ವಿಜಯಪುರ| ಶೂಟ್‌ಔಟ್‌ ಪ್ರಕರಣ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 13:07 IST
Last Updated 26 ನವೆಂಬರ್ 2020, 13:07 IST
ವಿಜಯಪುರ ನಗರದ ಹೊರವಲಯದ ಕನ್ನಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳೊಂದಿಗೆ ಪೊಲೀಸರು  
ವಿಜಯಪುರ ನಗರದ ಹೊರವಲಯದ ಕನ್ನಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳೊಂದಿಗೆ ಪೊಲೀಸರು     

ವಿಜಯಪುರ: ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಸಾಹುಕಾರ ಬೈರಗೊಂಡ ಅವರುನಗರದ ಹೊರವಲಯದ ಕನ್ನಾಳ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನ.2ರಂದು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್‌ನಿಂದ ಡಿಕ್ಕಿ ಹೊಡೆಸಿ, ಬಳಿಕ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.

ಜಾಲಗೇರಿ ತಾಂಡಾದ ಸಚಿನ್‌ ಚವ್ಹಾಣ(26) ಮತ್ತು ಚಡಚಣದ ಮಲ್ಲಿಕಾರ್ಜುನ ಪಾಟೀಲ(26) ಅವರನ್ನು ಬಂಧಿಸಿ, ಒಂದು ಕಂಟ್ರಿ ಪಿಸ್ತೂಲ್‌, ಒಂದು ಜೀವಂತ ಗುಂಡು, ಒಂದು ತಲವಾರ್‌ ಹಾಗೂ ಒಂದು ಮೊಬೈಲ್‌ ಫೊನ್‌ ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT