ADVERTISEMENT

ಮುದ್ದೇಬಿಹಾಳ | ಶ್ರಾವಣ: ಸೌಹಾರ್ದ ಕೂಟ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:23 IST
Last Updated 2 ಆಗಸ್ಟ್ 2025, 6:23 IST
ಸುದ್ದಿಗೋಷ್ಠಿಯಲ್ಲಿ ಅಯ್ಯೂಬ ಮನಿಯಾರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಅಯ್ಯೂಬ ಮನಿಯಾರ್ ಮಾತನಾಡಿದರು.   

ಮುದ್ದೇಬಿಹಾಳ: ರಂಜಾನ್ ಮಾಸದಲ್ಲಿ ಈದ್ ಸೌಹಾರ್ದ ಕೂಟ ಏರ್ಪಡಿಸಿದಂತೆ ಈ ಬಾರಿ ಮನಿಯಾರ ಚಾರಿಟಬಲ್ ಟ್ರಸ್ಟ್‌ನಿಂದ ಶ್ರಾವಣ ಮಾಸದ ಸೌಹಾರ್ದ ಕೂಟ ಹಮ್ಮಿಕೊಂಡಿದ್ದೇವೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯೂಬ ಮನಿಯಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ‘ಎಲ್ಲ ಧರ್ಮೀಯರಿಗೂ ಕಣ್ಣಿನ ಉಚಿತ ತಪಾಸಣಾ ಶಿಬಿರ, ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಟ್ರಸ್ಟ್‌ನಿಂದಲೇ ಚಿಕಿತ್ಸೆಗೆ ಕಳಿಸಿಕೊಡುವ ಕಾರ್ಯ ಮಾಡಲಾಗುವುದು’ ಎಂದು ತಿಳಿಸಿದರು.

‘ಆ.9ರಂದು ತಾಳಿಕೋಟೆಯಲ್ಲಿ , 10ರಂದು ಮುದ್ದೇಬಿಹಾಳ ತಾಲ್ಲೂಕು, ನಾಲತವಾಡ ಪಟ್ಟಣದ ಜನತೆಗೆ ಆಯಾ ಭಾಗದಲ್ಲಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ ನಡೆಸಲಾಗುವುದು. 11ರಿಂದ 14ರವರೆಗೆ ವಿಜಯಪುರದ ಪ್ರಭುಗೌಡ ಲಿಂಗದಳ್ಳಿ ಅವರ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘20ರಂದು ಬಿದರಕುಂದಿಯಲ್ಲಿರುವ ಮನಿಯಾರ ಅವರ ಶಾಲಾ ಕಟ್ಟಡದಲ್ಲಿ ಶ್ರಾವಣ ಮಾಸದ ಸೌಹಾರ್ದ ಕೂಟ ಜರುಗಲಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಅಲ್ಲಿ ಔಷಧ ವಿತರಣೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಆಸಕ್ತರು 81232 77124 ಸಂಖ್ಯೆ ಸಂಪರ್ಕಿಸಬಹುದು.

ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ, ಮುಖಂಡರಾದ ಹಾಜಿ ಮಹೆಬೂಬ ಹಡಲಗೇರಿ, ರೂಪಸಿಂಗ ಲೋಣಾರಿ, ದಾದಾ ಎತ್ತಿನಮನಿ, ಐ.ಎಲ್. ಮಮದಾಪೂರ, ಫಯಾಜ ಸಾಸನೂರ, ಎಂ.ಎಲ್.ಗೋಲಂದಾಜ, ಅಫ್ತಾಬ ಮನಿಯಾರ, ಹಾಜಿಮಲಂಗ ಯಕೀನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.