ಸಿಂದಗಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹೊರ ಆವರಣದಲ್ಲಿ ಬುಧವಾರ ರಾತ್ರಿ ಮಹಿಳೆಯರು ಅತ್ಯುತ್ಸಾಹದಿಂದ ಗಡಿಗೆ ಒಡೆಯುವ ಸ್ಪರ್ಧೆ, ಮ್ಯೂಜಿಕ್ ಚೇರ್, ಹಗ್ಗ-ಜಗ್ಗಾಟ, ಲೆಮನ್ ಸ್ಪೂನ್, ಬೆಂಕಿ ಇಲ್ಲದೆ ಸಿದ್ಧಪಡಿಸುವ ಆಹಾರ ಸಿದ್ಧತೆ, ರಂಗೋಲಿ ಸ್ಪರ್ಧೆಯಂತಹ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ 134ನೆಯ ಜಯಂತ್ಯುತ್ಸವ ಆಚರಣೆಯ ಅಂಗವಾಗಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಮಹಿಳಾ ಹಬ್ಬ ಆಯೋಜನೆ ಮಾಡಲಾಗಿತ್ತು.
ವಿಜಯಪುರ ನಗರದ ಲಕ್ಷ್ಮೀ ತೇರದಾಳಮಠ ಭರತನಾಟ್ಯ ಕಲಾ ತಂಡದವರಿಂದ ಸಾಮೂಹಿಕ ನೃತ್ಯಗಳು ಪ್ರದರ್ಶನಗೊಂಡು ಸಭಿಕರ ಮೆಚ್ಚುಗೆ ಪಡೆದುಕೊಂಡವು.
ಮಹಿಳಾ ಹಬ್ಬದ ಉದ್ಘಾಟನೆ: ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ(ಗ್ರೇಡ್-1) ಭವಾನಿ ಪಾಟೀಲ ಅವರು ಬುದ್ಧ, ಡಾ.ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಳಾ ಹಬ್ಬವನ್ನು ಉದ್ಘಾಟಿಸಿದರು.
ತಹಶೀಲ್ದಾರ ಗ್ರೇಡ್-2 ಇಂದಿರಾಬಾಯಿ ಬಳಗಾನೂರ ಅಧ್ಯಕ್ಷತೆ ವಹಿಸಿದ್ದರು.
ನಿವೇದಿತಾ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ಸ್ಥಾವರಮಠ ‘ಮಹಿಳೆ ಇಂದು ಯಾವುದರಲ್ಲೂ ಹಿಂದಿಲ್ಲ. ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆದಿದ್ದಾಳೆ’ ಎಂದು ಮಾತನಾಡಿದರು.
ಅಂಬಿಕಾ ಪಾಟೀಲ, ಸುವರ್ಣಾ ಮಾಣಸುಣಗಿ ಕಾರ್ಯಕ್ರಮ ನಿರೂಪಿಸಿದರು.
ಶರಣಮ್ಮ ನಾಯಕ, ನೀಲಮ್ಮ ಯಡ್ರಾಮಿ, ಶಾರದಾ ಬೆಟಗೇರಿ, ಅಶ್ವಿನಿ ನಾಯಕ ವೇದಿಕೆಯಲ್ಲಿ ಇದ್ದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ದಲಿತ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ಸಿಂಗೆ, ಪರುಶರಾಮ ಕಾಂಬಳೆ, ಮಲ್ಲೂ ಕೂಚಬಾಳ, ರವಿ ಹೋಳಿ, ದತ್ತು ನಾಲ್ಕಮಾನ, ಸಂತೋಷ ಜಾಧವ, ನಿಂಗರಾಜ ಗುಡಿಮನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.