ADVERTISEMENT

ತಾಳಿಕೋಟೆ: ತುಂಬಿ ಹರಿಯುತ್ತಿರುವ ಸೋಗಲಿ ಹಳ್ಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:06 IST
Last Updated 11 ಆಗಸ್ಟ್ 2025, 4:06 IST
ತಾಳಿಕೋಟೆ ತಾಲ್ಲೂಕಿನ ಮೂಕಿಹಾಳ ಸೋಗಲಿ ಹಳ್ಳವೂ ಭಾನುವಾರ ಪ್ರವಾಹದಿಂದ ತುಂಬಿಹರಿಯುತ್ತಿದ್ದು, ಅದರಲ್ಲೇ ವಾಹನಗಳು ಸಂಚರಿಸಿದವು
ತಾಳಿಕೋಟೆ ತಾಲ್ಲೂಕಿನ ಮೂಕಿಹಾಳ ಸೋಗಲಿ ಹಳ್ಳವೂ ಭಾನುವಾರ ಪ್ರವಾಹದಿಂದ ತುಂಬಿಹರಿಯುತ್ತಿದ್ದು, ಅದರಲ್ಲೇ ವಾಹನಗಳು ಸಂಚರಿಸಿದವು   

ತಾಳಿಕೋಟೆ: ಮಳೆಯಿಂದ ತಾಲ್ಲೂಕಿನ ಮೂಕಿಹಾಳ ಸೋಗಲಿ ಹಳ್ಳವೂ ಭಾನುವಾರ ಪ್ರವಾಹದಿಂದ ತುಂಬಿಹರಿಯುತ್ತಿದ್ದು, ನೆಲಮಟ್ಟದ ಸೇತುವೆ ಜಲಾವೃತವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ಪಟ್ಟಣದಿಂದ ಹಡಗಿನಾಳ-ಮೂಕಿಹಾಳ ಮಾರ್ಗದಲ್ಲಿ ವಾಹನ ದಟ್ಟಣೆಯಿಂದ ರಸ್ತೆ, ಸೇತುವೆ ಹಾಳಾಗಿವೆ. ಆದಾಗ್ಯೂ ಪೊಲೀಸ್ ಸರ್ಪಗಾವಲಿನಲ್ಲಿ ಕಾರು, ಬಸ್, ಲಾರಿಗಳನ್ನು ನಿಧಾನಕ್ಕೆ ದಾಟಿಸಲಾಗುತ್ತಿದೆ.

ತಾಳಿಕೋಟೆ ಪಟ್ಟಣ ಸಂಪರ್ಕಿಸುವ ಡೋಣಿ ನದಿ ಸೇತುವೆ ಪ್ರವಾಹದಲ್ಲಿ ಮುಳುಗಿ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಸವನ ಬಾಗೇವಾಡಿ, ವಿಜಯಪುರಕ್ಕೆ ಹೋಗುವ ಬೃಹತ್‌ ವಾಹನಗಳು ಮೂರು ಕಿ.ಮೀ. ದೂರದ ಮಿಣಜಗಿ ಕ್ರಾಸ್‌ಗೆ ತಲುಪಲು 15 ಕಿ.ಮೀ. ಸುತ್ತು ಹಾಕಿ ಬರುತ್ತಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.