ADVERTISEMENT

ಜ್ಞಾನ, ಅನುಭವದ ಕಣಜ ‘ಸುಧಾ’ ವಿಶೇಷಾಂಕ

ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:55 IST
Last Updated 8 ಏಪ್ರಿಲ್ 2021, 16:55 IST
‘ಸುಧಾ’ ವಾರ ಪತ್ರಿಕೆ ಹೊರತಂದಿರುವ ಯುಗಾದಿ ವಿಶೇಷಾಂಕವನ್ನು ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಗುರುವಾರ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ
‘ಸುಧಾ’ ವಾರ ಪತ್ರಿಕೆ ಹೊರತಂದಿರುವ ಯುಗಾದಿ ವಿಶೇಷಾಂಕವನ್ನು ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಗುರುವಾರ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ‘ಸುಧಾ’ ಯುಗಾದಿ ವಿಶೇಷಾಂಕವು ಜ್ಞಾನ ಮತ್ತು ಅನುಭವದ ಕಣಜವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅಭಿಪ್ರಾಯಪಟ್ಟರು.

‘ಸುಧಾ’ ವಾರ ಪತ್ರಿಕೆ ಹೊರತಂದಿರುವ ಯುಗಾದಿ ವಿಶೇಷಾಂಕವನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸುಧಾ’ ಯುಗಾದಿ ವಿಶೇಷಾಂಕವು ಆರೋಗ್ಯ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತಾ, ಸಿನಿಮಾ, ಕೃಷಿ, ಪ್ರವಾಸ ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ಬಗ್ಗೆ ಸಮೃದ್ಧ ಮಾಹಿತಿ ಒಳಗೊಂಡಿದ್ದು, ಕೋವಿಡ್‌ ಕಾಲಘಟ್ಟದಲ್ಲಿ ಓದುಗರಿಗೆ ಸಮಗ್ರ ಮಾಹಿತಿ ನೀಡುವ ಜೊತೆಗೆ ಸಂತೋಷ ನೀಡುವಂತಿದೆ ಎಂದು ಹೇಳಿದರು.

ADVERTISEMENT

ನಾಡಿನ ಹತ್ತಾರು ಲೇಖಕರು, ಸಾಹಿತಿಗಳು ಮತ್ತು ಪತ್ರಕರ್ತರು ತಮ್ಮ ಅನುಭವ, ಜ್ಞಾನವನ್ನು ಯುಗಾದಿ ವಿಶೇಷಾಂಕದಲ್ಲಿ ಲೇಖನ, ಕಥೆ, ಕವಿತೆ, ಪ್ರಬಂಧಗಳ ಮೂಲಕ ಓದುಗರಿಗೆ ಉಣಬಡಿಸಿದ್ದಾರೆ. ವಿಶೇಷಾಂಕವೊಂದರಲ್ಲೇ ಹತ್ತಾರು ಕ್ಷೇತ್ರಗಳ ಒಳಹರಿವು ಒಳಗೊಂಡಿದೆ. ಪ್ರತಿಯೊಬ್ಬರೂ ಇದನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

‘ಸುಧಾ’ ವಾರ ಪತ್ರಿಕೆಯೂ ಪ್ರತಿ ವರ್ಷಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ನಾಡಿನಲ್ಲಿ ಹೊಸ ಪ್ರತಿಭೆಗಳ ಹುಟ್ಟಿಗೆ ವೇದಿಕೆ ಕಲ್ಪಿಸುತ್ತಾ ಬಂದಿದೆ. ಇಲ್ಲಿ ಗುರುತಿಸಿಕೊಂಡವರು ಇಂದು ನಾಡಿನ ಪ್ರಸಿದ್ಧ ಸಾಹಿತಿ, ಕವಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸುಧಾ’ ವಾರ ಪತ್ರಿಕೆ ಅಂದಿನಿಂದ ಇಂದಿನ ವರೆಗೂ ಓದುಗರ ಮೇಲೆ ತನ್ನ ಪ್ರಭಾವ ಉಳಿಸಿಕೊಂಡು ಬಂದಿದೆ. ಈ ವಿಶೇಷಾಂಕದ ಹಿಂದೆ ಸಾಕಷ್ಟು ಜನರ ಶ್ರಮ ಇದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತಿತರರ ಸಾಮಾಜಿಕ ಜಾಲತಾಣದಲ್ಲಿ ಸಿಗದ ಆನಂದ, ಸಂತೋಷವನ್ನು ಈ ವಿಶೇಷಾಂಕದಿಂದ ಲಭಿಸುವಂತಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಉತ್ತಮ ಪುಸ್ತಕಗಳು ಯಾವುವು ಎಂದು ತಿಳಿದುಕೊಳ್ಳುವುದು ಕಷ್ಟವಾಗಿದೆ. ಸುಧಾ ಯುಗಾದಿ ವಿಶೇಷಾಂಕ ಉತ್ತಮ ಪುಸ್ತಕ, ಸಾಹಿತಿಗಳನ್ನು ನಮಗೆ ಪರಿಚಯಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಎನ್‌.ಕೆ.ಗೋಠೆ, ‘ಪ್ರಜಾವಾಣಿ’ ವಿಜಯಪುರ ನಗರದ ಪತ್ರಿಕಾ ಏಜೆಂಟ್‌ ಬಾಬು ಮಲ್ಲಪ್ಪ ಮಂಗಣ್ಣವರ, ಪ್ರಸರಣ ವಿಭಾಗದ ವಿಜಯಪುರ ಜಿಲ್ಲಾ ಸಹಾಯಕ ವ್ಯವಸ್ಥಾಪಕ ಬಸಪ್ಪ ಮಗದುಮ್‌ ಇದ್ದರು.

***

ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಹೊಸತನದಿಂದ ಕೂಡಿದ್ದರೂ ಪುಸ್ತಕ, ಪತ್ರಿಕೆಗಳಿಗೆ ಪರ್ಯಾಯವಾಗಲಾರವು

–ಗೋವಿಂದ ರೆಡ್ಡಿ, ಸಿಇಒ,

ಜಿಲ್ಲಾ ಪಂಚಾಯ್ತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.