ADVERTISEMENT

ಸಾಲ, ಸೌಲಭ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 11:29 IST
Last Updated 25 ಅಕ್ಟೋಬರ್ 2019, 11:29 IST
ವಿಜಯಪುರದ ಬಳಮಕರ್ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್‌ನಿಂದ ಗುರುವಾರ ಆಯೋಜಿಸಿದ್ದ ಗ್ರಾಹಕರ ಸಂಪರ್ಕ ಸಭೆ ಹಾಗೂ ಸಾಲ ಮೇಳದಲ್ಲಿ ಫಲಾನುಭವಿಗೆ ಕಾರಿನ ಕೀ ಹಸ್ತಾಂತರಿಸಲಾಯಿತು.
ವಿಜಯಪುರದ ಬಳಮಕರ್ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್‌ನಿಂದ ಗುರುವಾರ ಆಯೋಜಿಸಿದ್ದ ಗ್ರಾಹಕರ ಸಂಪರ್ಕ ಸಭೆ ಹಾಗೂ ಸಾಲ ಮೇಳದಲ್ಲಿ ಫಲಾನುಭವಿಗೆ ಕಾರಿನ ಕೀ ಹಸ್ತಾಂತರಿಸಲಾಯಿತು.   

ವಿಜಯಪುರ: ‘ಭಾರತ ಸರ್ಕಾರದ ನಿರ್ದೇಶನದಂತೆ ಎಲ್ಲಾ ಬ್ಯಾಂಕುಗಳು ಒಂದೇ ಸೂರಿನಡಿಯಲ್ಲಿ ಕೆಲಸ ನಿರ್ವಹಿಸಿದ್ದು, ಎರಡು ದಿನಗಳಲ್ಲಿ ವಿವಿಧ ರೀತಿಯ ಸಾಲ, ಸೌಲಭ್ಯಗಳನ್ನು ವಿತರಿಸಲಾಗಿದೆ’ ಎಂದು ಸಿಂಡಿಕೇಟ್ ಬ್ಯಾಂಕ್‌ನ ಮಹಾ ಪ್ರಬಂಧಕ ವೀರೇಶ ಪಟ್ಟಣಶೆಟ್ಟಿ ಹೇಳಿದರು.

ನಗರದ ಸುಕೂನ್ ಲೇಔಟ್‌ನಲ್ಲಿರುವ ಬಳಮಕರ್ ಸಭಾಂಗಣದಲ್ಲಿ ಲೀಡ್ ಬ್ಯಾಂಕ್‌ ಸಿಂಡಿಕೇಟ್ ಬ್ಯಾಂಕ್‌ ಹಾಗೂ ಜಿಲ್ಲೆಯ 19ಕ್ಕೂ ಅಧಿಕ ಬ್ಯಾಂಕ್‌ಗಳ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ಗ್ರಾಹಕರ ಸಭೆ ಹಾಗೂ ಸಾಲ ಮೇಳದಲ್ಲಿ ಅವರು ಮಾತನಾಡಿದರು.

‘ಗ್ರಾಹಕರಿಗೆ ಸಾಲ ಪಡೆಯಲು ಬೇಕಾಗಿರುವ ಪತ್ರಗಳ ಪಟ್ಟಿಯನ್ನು ಒಂದೇ ಬಾರಿ ತಿಳಿಸಿ, ತ್ವರಿತಗತಿಯಲ್ಲಿ ಸ್ಪಂದಿಸಿ, ಸಾಲ ವಿತರಿಸಲಾಗಿದೆ’ ಎಂದರು.

ಕೆವಿಜಿ ಬ್ಯಾಂಕ್‌ನ ನಾರಾಯಣ ಯಾಜಿ ಮಾತನಾಡಿ, ‘ಆರ್ಥಿಕ ಅಭಿವೃದ್ಧಿಗೆ ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿಜಯಪುರ ಐತಿಹಾಸಿಕ ಪ್ರವಾಸಿ ತಾಣವಾಗಿದ್ದು, ಹೋಂಸ್ಟೇಗಳನ್ನು ಆರಂಭಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ ಐನಾಪುರ ಮಾತನಾಡಿ, ‘ಎರಡು ದಿನಗಳ ಗ್ರಾಹಕ ಸಂಪರ್ಕ ಕಾರ್ಯಕ್ರಮದಲ್ಲಿ 1,410 ಅರ್ಜಿಗಳನ್ನು ಸ್ವೀಕರಿಸಿ ₨65.14 ಕೋಟಿ ಸಾಲ ವಿತರಿಸಲಾಯಿತು’ ಎಂದು ತಿಳಿಸಿದರು.ಪ್ರಗತಿಪರ ರೈತ ಶಿವಾನಂದ ಅಂಗಡಿ ಹಾಗೂ ವಿವಿಧ ಗ್ರಾಹಕರು ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು. ವಿವಿಧ ಬ್ಯಾಂಕುಗಳ ಅಧಿಕಾರಿಗಳಾದ ಪಿ.ಶ್ರೀಕಾಂತ್, ಎಂ.ಎನ್.ವಿದ್ಯಾಗಣೇಶ, ಪ್ರಶಾಂತಕುಮಾರ್ ಇದ್ದರು.ವಿದ್ಯಾವತಿ ಐಗಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.