ADVERTISEMENT

ನ. 29ರಂದು ತಾಳಿಕೋಟೆ ಸಂಪೂರ್ಣ ಬಂದ್‌ಗೆ ಕರೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:27 IST
Last Updated 27 ಅಕ್ಟೋಬರ್ 2025, 4:27 IST
<div class="paragraphs"><p>ಅಕ್ಟೋಬರ್ 29ರಂದು ತಾಳಿಕೋಟೆ ಸಂಪೂರ್ಣ ಬಂದ್ ನಡೆಸಲು ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶನಿವಾರ ತೀರ್ಮಾನಿಸಲಾಯಿತು.</p></div>

ಅಕ್ಟೋಬರ್ 29ರಂದು ತಾಳಿಕೋಟೆ ಸಂಪೂರ್ಣ ಬಂದ್ ನಡೆಸಲು ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶನಿವಾರ ತೀರ್ಮಾನಿಸಲಾಯಿತು.

   

ತಾಳಿಕೋಟೆ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗವಾಯಿ ಅವರ ಅಪಮಾನ ಖಂಡಿಸಿ, ದಲಿತ ಮಹಿಳೆಯ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯಿಸಿ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಅ. 29ರಂದು ತಾಳಿಕೋಟೆ ಸಂಪೂರ್ಣ ಬಂದ್ ನಡೆಸಲು ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಶನಿವಾರ ತೀರ್ಮಾನಿಸಲಾಯಿತು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರೆದ ವಿವಿಧ ದಲಿತಪರ ಸಂಘಟನೆಗಳ ಹಾಗೂ ತಾಲ್ಲೂಕಿನ ಗ್ರಾಮಗಳ ದಲಿತ ಮುಖಂಡರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ADVERTISEMENT

ತಾಳಿಕೋಟೆ ಸಂಪೂರ್ಣ ಬಂದ್‌ನ ಯಶಸ್ಸಿಗೆ ಪಟ್ಟಣದ ಎಲ್ಲ ನಾಗರಿಕರು ಸಹಕರಿಸಬೇಕು ಎಂದು ಮುಖಂಡರು ಕೇಳಿಕೊಂಡಿದ್ದಾರೆ.

ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ, ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ಡಿಎಸ್ಎಸ್ ವಿಭಾಗಿಯ ಸಂಚಾಲಕ ದೇವೇಂದ್ರ ಹಾದಿಮನಿ, ಒಕ್ಕೂಟದ ಪದಾಧಿಕಾರಿಗಳಾದ ಜೈ ಭೀಮ್ ಮುತ್ತಗಿ, ಮಹೇಶ ಚಲವಾದಿ, ಸಿದ್ದಪ್ಪ ಕಟ್ಟಿಮನಿ, ರೇವಣಪ್ಪ ದಲ್ಲಾಳಿ, ಮಾಳಪ್ಪ ಮಾಳಳ್ಳಿ, ಕಾಶಿನಾಥ ಕಾರಾಗನೂರ, ಶಂಕರ ಪಡಸಾಲಿ, ಗುರುಪ್ರಸಾದ ಗೊಟಖಂಡಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.