ADVERTISEMENT

ಹಿರೂರ ಪಿಕೆಪಿಎಸ್‌ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ 

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:01 IST
Last Updated 3 ಸೆಪ್ಟೆಂಬರ್ 2025, 6:01 IST
ತಾಳಿಕೋಟೆ ತಾಲ್ಲೂಕಿನ ಹಿರೂರ ಗ್ರಾಮದ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಂಗಣ್ಣ ಅಡಿವೆಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಭೀರಪ್ಪ ಗುರುಬಸಪ್ಪ ಪೂಜಾರಿ ಅವಿರೋಧವಾಗಿ ಮಂಗಳವಾರ  ಆಯ್ಕೆಯಾದರು
ತಾಳಿಕೋಟೆ ತಾಲ್ಲೂಕಿನ ಹಿರೂರ ಗ್ರಾಮದ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಂಗಣ್ಣ ಅಡಿವೆಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಭೀರಪ್ಪ ಗುರುಬಸಪ್ಪ ಪೂಜಾರಿ ಅವಿರೋಧವಾಗಿ ಮಂಗಳವಾರ  ಆಯ್ಕೆಯಾದರು   

ತಾಳಿಕೋಟೆ: ತಾಲ್ಲೂಕಿನ ಹಿರೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಸಂಗಣ್ಣ ಅಡಿವೆಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಭೀರಪ್ಪ ಗುರುಬಸಪ್ಪ ಪೂಜಾರಿ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.

ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಈ ಚುನಾವಣೆಯಲ್ಲಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ  ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಐ.ಜೆ. ನಾಯಕ  ಘೋಷಿಸಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಬಿರಾದಾರ ಸಹಾಯಕರಾಗಿ ಕಾರ್ಯ  ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘಕ್ಕೆ ಆಯ್ಕೆಯಾದ 12 ಜನ ನೂತನ ಸದಸ್ಯರೆಲ್ಲರೂ ಭಾಗವಹಿಸಿದ್ದರು.

ADVERTISEMENT

ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಸಿದ್ದಣ್ಣಗೌಡಪ್ಪ ಚೌದ್ರಿ, ಚಂದ್ರಶೇಖರ್ ತಿಪ್ಪಣ್ಣ ಧನ್ನೂರ, ಶಿವಾನಂದ ಸಂಗನಗೌಡ ಪಾಟೀಲ, ಮುರ್ತುಜಾ ಇ. ಮುಲ್ಲಾ, ಈಶ್ವರಪ್ಪ ಸಂಗಣ್ಣ ಮಂಟಗಿ, ಸುಭಾಸ ನಿಂಗಪ್ಪ ಹರಿಜನ, ಶರಣಪ್ಪ ಸಂಗಪ್ಪ ತಳವಾರ, ಮಾದೇವಿ ನೀಲಪ್ಪ ಆಲ್ಯಾಳ, ಸವಿತಾ ಸಂಗನಗೌಡ ಅಸ್ಕಿ, ಚಾಂದಬಿ ಅಲ್ಲಾಭಕ್ಷ ಬಳವಾಟ ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಬಿ.ಜಿ.ಪಡಸಲಗಿ ಇವರನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.

ಗ್ರಾಮದ ಗಣ್ಯರಾದ ದೇವೇಂದ್ರಪ್ಪಗೌಡ ಬಿರಾದಾರ, ಸಂಗನಗೌಡ ಅಸ್ಕಿ, ಬಸನಗೌಡ ವಂದಲಿ, ಸಿದ್ದನಗೌಡ ಬಿರಾದಾರ, ತುಕಾರಾಂ ಗೊಂದಳಿ, ಬಸನಗೌಡ ಚೌಧರಿ, ಲಕ್ಷ್ಮಣಗೌಡ ಬಿರಾದಾರ, ಗುರಣ್ಣ ಚೌಧರಿ, ಶಾಂತಗೌಡ ಬಿರಾದಾರ, ಖಾಜೇಶಾ ಮಕಾಂದಾರ, ದಿಗಂಬರ ಕುಲಕರ್ಣಿ ಸೋಮಶೇಖರ ಯರಗಲ್, ರಾಮನಗೌಡ ಚೌದರಿ, ಆರ್.ಎಸ್. ಪಾಟೀಲ ಚೋಕಾವಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.