ಮುದ್ದೇಬಿಹಾಳ: ಈ ವರ್ಷ ಸುಮಾರು ₹5.94 ಕೋಟಿ ಹಣವನ್ನು ಅಲ್ಪಾವಧಿ, ಕೃಷಿ ಮಧ್ಯಮಾವಧಿ ಹಾಗೂ ಟ್ರ‍್ಯಾಕ್ಟರ್ ಖರೀದಿಗಾಗಿ ಸಾಲ ನೀಡಲಾಗಿದೆ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಶ್ರೀಶೈಲ ಮರೋಳ ಹೇಳಿದರು.
ತಾಲ್ಲೂಕು ತಂಗಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 77ನೇ ವಾರ್ಷಿಕ ಸರ್ವ ಸಾಧಾರಣ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ರೈತರೇ ಸಂಘದ ಬೆನ್ನುಲುಬಾಗಿದ್ದು, ಈ ವರ್ಷ ₹10.17 ಲಕ್ಷ ಲಾಭ ಗಳಿಕೆಯಾಗಿದೆ. ₹121.75 ಲಕ್ಷ ಷೇರು ಬಂಡವಾಳವನ್ನು ಹೊಂದಿ ಸಾಲ ವಸೂಲಾತಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಿದೆ’ ಎಂದು ಹೇಳಿದರು.
ಸಂಘದ ಹಿರಿಯ ಸದಸ್ಯ ಸಹಕಾರಿ ಧುರೀಣ ಬಸವರಾಜ ಇಸ್ಲಾಂಪುರ ಮಾತನಾಡಿ, ರೈತರು ಸಹಕಾರ ಸಂಘದಲ್ಲಿ ವಿಶ್ವಾಸವಿರಿಸಿ ಸಹಕರಿಸಿದ್ದಾರೆ. ರೈತರು ಹೆಚ್ಚು ಹಣವನ್ನು ಸಂಘದಲ್ಲಿ ಠೇವಣಿ ಇಡುವಂತೆ ವಿನಂತಿಸಿದರು.
ಕ್ಷೇತ್ರಾಧಿಕಾರಿ ಬಿ.ಎಸ್.ಬಡದಾನಿ, ನಿರ್ದೇಶಕ ಮಂಡಳಿ ಉಪಾಧ್ಯಕ್ಷ ಮಲೀಕಸಾಬ ನದಾಫ್, ಸದಸ್ಯರಾದ ಮಾಂತೇಶ ಹೊಳಿ, ಸಂಗಯ್ಯ ಸಾರಂಗಮಠ, ಗುರನಗೌಡ ಕರಿಬಂಟನಾಳ, ಶಿವಯೋಗಿ ಹೊಳಿ, ನಿಜಗುಣಪ್ಪ ವಾಲಿಕಾರ, ಜಯಶ್ರೀ ಮೇಟಿ, ಸುನಂದಾ ನಿಡಗುಂದಿ, ಮಾಂತೇಶ ಛಲವಾದಿ, ವೃತ್ತಿಪರ ನಿರ್ದೇಶಕರಾದ ದರಿಯಪ್ಪ ದೇಸಣಗಿ, ಸಂಘದ ಮುಖ್ಯ ಕಾರ್ಯದರ್ಶಿ ಸಂಗಣ್ಣ ನಿಡಗುಂದಿ, ಮುಖಂಡರಾದ ರಾಜೂಗೌಡ ಕೊಂಗಿ, ಜಿ.ಜಿ.ಮೋಟಗಿ, ಬಸವರಾಜ್ ತಾಳಿಕೋಟಿ, ಶಂಕ್ರಪ್ಪ ಹೊಳಿ, ಸಂಗಣ್ಣ ದೇವರಮನಿ, ಶಿವಾನಂದ್ ಮಂಕಣಿ, ರಾಜುಧಣಿ ದೇಶಮುಖ, ಸಂಗಣ್ಣ ಕವಡಿಮಟ್ಟಿ, ಗಂಗೂರ, ಕುಂಚಗನೂರ, ಕಮಲದಿನ್ನಿ, ಅಮರಗೋಳ, ತಂಗಡಗಿ ಗ್ರಾಮದ ಸದಸ್ಯರು ಇದ್ದರು. ರಮೇಶ್ ಲಿಂಗದಳ್ಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.