ADVERTISEMENT

ಸಂಪನ್ಮೂಲಗಳ ಸದ್ಬಳಕೆ ಅಗತ್ಯ: ವಿ.ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:55 IST
Last Updated 5 ಡಿಸೆಂಬರ್ 2019, 14:55 IST
ಬಬಲೇಶ್ವರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ವಿಜ್ಞಾನ ಹಬ್ಬವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೌರಮ್ಮ ಬೂದಿಹಾಳ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು
ಬಬಲೇಶ್ವರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ವಿಜ್ಞಾನ ಹಬ್ಬವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೌರಮ್ಮ ಬೂದಿಹಾಳ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು   

ತಿಕೋಟಾ: ‘ಜಗತ್ತಿನ ಹಲವಾರು ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಚ್ಚಾ ಸಂಪನ್ಮೂಲಗಳ ಬಳಕೆ ಕಡಿಮೆ. ಆದ್ದರಿಂದ, ಕಚ್ಚಾ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು.

ಬಬಲೇಶ್ವರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಮಕ್ಕಳ ವಿಜ್ಞಾನ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಪಾನ್ ದೇಶದ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಇದೆ. ನಾವು ಕೂಡಾ ನಮ್ಮ ದೇಶದಲ್ಲಿ ತಯಾರಿಸಿದ ವಸ್ತುಗಳನ್ನು ಬಳಸಲು ಹೆಚ್ಚಿನ ಆದ್ಯತೆಯನ್ನು ಕೊಡಬೇಕು’ ಎಂದರು.

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಹಾಗೂ ಮಕ್ಕಳ ವಿಜ್ಞಾನ ಹಬ್ಬಕ್ಕೆ ಜಯವಾಗಲಿ ಎಂಬ ವಿವಿಧ ವಿಜ್ಞಾನ ಘೋಷಣೆಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳು ಪ್ರಭಾತಪೇರಿ ಹಾಕುವ ಮೂಲಕ ವಿಜ್ಞಾನದ ಪ್ರಾಮುಖ್ಯವನ್ನು ಸಾರಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೌರಮ್ಮ ಬೂದಿಹಾಳ ಉದ್ಘಾಟಿಸಿದರು. ಎಪಿಎಂಸಿ ನಿರ್ದೇಶಕ ಹಣಮಂತ ಲೋಕುರಿ, ಮಲ್ಲು ಕನ್ನೂರ, ಬಿ.ಜಿ.ಬಿರಾದಾರ, ಚನಬಸಪ್ಪ ಕೋಟ್ಯಾಳ, ಆನಂದ ಬೂದಿಹಾಳ, ವಿ.ಎಸ್.ಮೇತ್ರಿ, ವಿ.ಆರ್.ಹಂಚಿನಾಳ, ಎಚ್.ವಿ.ಮಾಲಗಾರ, ರಮೇಶ್ ಕ್ಷತ್ರಿ, ಗಂಗಾ ಕೋಲಕಾರ, ಉಮಾ ಜಾಧವ, ಹರೀಶ ಬಬಲೇಶ್ವರ, ಎಸ್.ಬಿ.ಹಲಸಗಿ, ಎನ್.ಎಲ್‌.ಇಂಗಳೆ, ಬಿ.ಎನ್.ಬಂಢಾರಿ, ಜ್ಯೋತಿ ತುಳಸಿಗೇರಿ, ಉಷಾ ರಾಠೋಡ ಇದ್ದರು.

ಅಶೋಕ ಬೂದಿಹಾಳ ಸ್ವಾಗತಿಸಿದರು. ಶಂಕರ ತಳವಾರ ನಿರೂಪಿಸಿ, ಪರಶುರಾಮ ಹಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.