ADVERTISEMENT

ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಮರ; ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 10:24 IST
Last Updated 5 ಏಪ್ರಿಲ್ 2022, 10:24 IST
ಬೃಹತ್ ಮರ ಉರುಳಿ ಬಿದ್ದಿದ್ದರಿಂದ ಜಖಂಗೊಂಡ ಅಟೋ ರಿಕ್ಷಾ
ಬೃಹತ್ ಮರ ಉರುಳಿ ಬಿದ್ದಿದ್ದರಿಂದ ಜಖಂಗೊಂಡ ಅಟೋ ರಿಕ್ಷಾ   

ವಿಜಯಪುರ: ಚಲಿಸುತ್ತಿದ್ದ ಅಟೋ ರಿಕ್ಷಾದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಸೋಲಾಪುರ ರಸ್ತೆಯ ಪೊಲೀಸ್ ತರಬೇತಿ ಕೇಂದ್ರದ ಆವರಣದಲ್ಲಿದ್ದ ಮರ ಏಕಾಏಕಿ ಉರುಳಿ ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಸಿದ್ದಾರೂಢ ಕಾಲೊನಿಯ ನಿವಾಸಿ ಯಲ್ಲಮ್ಮ ಕೊಂಡಗೂಳಿ (45) ಸಾವಿಗೀಡಾಗಿದ್ದಾರೆ.

ಇಂದುತಾಯಿ ಕುಲಕರ್ಣಿ, ಚಂದ್ರಕಲಾ ವಾಲೀಕಾರ, ಮಂದಾಕಿನಿ ಬಡಿಗೇರ, ಸುವರ್ಣಾ ಮಜ್ಜಿಗಿ, ವಿಜಯಪುರ ತಾಲ್ಲೂಕಿನ ಮದಬಾವಿ ತಾಂಡಾದ ಅಟೋ ಚಾಲಕ ಸಚಿನ್‌ ರಾಠೋಡಗೆ ಗಾಯವಾಗಿದೆ.

ADVERTISEMENT

ಗಾಯಾಳುಗಳಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಸ್ಥಿತಿ‌ ಗಂಭೀರವಾಗಿದೆ.

ಮರ ರಸ್ತೆ ಮೇಲೆ ಬಿದ್ದಿರುವುದರಿಂದ ಈ ಮಾರ್ಗದಲ್ಲಿ ಗಂಟೆಗಳ ಕಾಲ ಸಂಚಾರ ಬಂದ್‌ ಆಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಹಾಗೂ ಗಾಂಧಿ ಚೌಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.