
ಬಸವನಬಾಗೇವಾಡಿ: ಬೆಂಬಲಬೆಲೆ ಯೋಜನೆಯಡಿ 2025–26ನೇ ಸಾಲಿನಲ್ಲಿ ಗುಣಮಟ್ಟದ ತೊಗರಿ ಬೆಳೆಯನ್ನು ಪ್ರತಿ ಕ್ವಿಂಟಲ್‌ಗೆ ₹8,000ಕ್ಕೆ ಖರೀದಿಸುವ ಸಲುವಾಗಿ ಪಟ್ಟಣದಲ್ಲಿ ತೆರೆದ ಖರೀದಿ ಕೇಂದ್ರಕ್ಕೆ ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಕ್ಕಾಗ ಮಾತ್ರ ಅವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ ₹6000 ದರ ಸಿಗುತ್ತಿದ್ದು, ಇಲ್ಲಿ ₹8,000 ದರವಿದೆ. ಮಧ್ಯವರ್ತಿಗಳ ಮೊರೆ ಹೋಗದೆ, ಖರೀದಿ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಲೋಕನಾಥ ಅಗರವಾಲ, ಬಾಲಚಂದ್ರ ಮುಂಜಾನೆ, ಹಣಮಂತ ಯರಂತೇಲಿ, ರವಿ ರಾಠೋಡ, ಕೆಪಿಸಿಸಿ ಸದಸ್ಯ ಶೇಖರ ಗೊಳಸಂಗಿ, ಎಂ.ಜಿ. ಆದಿಗೊಂಡ, ಸಂಕನಗೌಡ ಪಾಟೀಲ, ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಉಮೇಶ ಹಾರಿವಾಳ, ಬಸವರಾಜ ಕೋಟಿ, ಜಗದೇವಿ ಗುಂಡಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.