ADVERTISEMENT

ಮಾತೃ ದೇವೊ ಭವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 11:45 IST
Last Updated 9 ಅಕ್ಟೋಬರ್ 2020, 11:45 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ಮನೆಯೇ ಮೊದಲ ಪಾಠಶಾಲೆ. ಜನನಿ ತಾನೆ ಮೊದಲ ಗುರು. ಜನನಿಯಿಂದ ಕಲಿತ ನಾವೇ ಧನ್ಯರು ಅನ್ನುವಂತ ಮಾತನ್ನು ನಾವು ಚಿಕ್ಕವರಿದ್ದಾಗ ಕೇಳಿದ್ದೇವೆ. ಈ ಭೂಮಿಯ ಮೇಲೆ ತಾಯಿಗೆ ಕೊಡುವ ಗೌರವ ಬಹಳ ದೊಡ್ಡದು. ಅದಕ್ಕಾಗಿ ಜಗತ್ತಿನ ಮಹಾಪುರುಷರೆಲ್ಲರೂ ಮಾತೃಭಕ್ತರೇ ಆಗಿದ್ದರೆನ್ನುವುದಕ್ಕೆ ಸಾಕ್ಷಿ ಇದೆ.

ಸನ್ಯಾಸಿಯಾದ ಮೇಲೂ ಶ್ರೀ ಶಂಕರಾಚಾರ್ಯರು ಅವರ ಮಾತೆಯ ಅಂತ್ಯಸಂಸ್ಕಾರಕ್ಕೆ ಬಂದು, ತಾಯಿಯ ಅಂತಿಮ ಆಸೆ ಪೂರ್ಣಗೊಳಿಸಿದರು. ಸಮರ್ಥ ರಾಮದಾಸರು ಸರ್ವಸಂಗ ಪರಿತ್ಯಾಗಿಗಳಾದ ಮೇಲೂ, ಶ್ರೀರಾಮನ ದರ್ಶನ ಪಡೆದ ಮೇಲೂ ವೃದ್ಧಮಾತೆಯ ದರ್ಶನಕ್ಕೆ ಮರಳಿ ಬಂದು ಆಕೆಗೂ ರಾಮ ದರ್ಶನ ಮಾಡಿಸಿದರು. ಆ ಮಹಾಭಕ್ತರು ಮಾತೃಋಣವನ್ನು ತೀರಿಸುವ ಹಾಗೂ ಮಾತೆಯ ಮಹಿಮೆಯನ್ನು ಲೋಕಕ್ಕೆ ತಿಳಿಸಲು ತೋರಿದ್ದು ಆದರ್ಶಗಳಲ್ಲವೇ?

ಛತ್ರಪತಿ ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮೊದಲಾದವರು ತಾಯಿಯ ತೊಡೆಯಲ್ಲೆ ತೊದಲಾಡಿ ಆಕೆಯಿಂದಲೇ ಉತ್ತಮ ಸಂಸ್ಕಾರ ಹೊಂದಿದವರೆಂದು ಇತಿಹಾಸ ಓದಿದವರಿಗೆ ತಿಳಿದೇ ಇದೆ.

ADVERTISEMENT

ವಿಶ್ವ ವಿಜೇತ ನೆಪೋಲಿಯನ್‌ಗೆ ಯಾರೋ ಕೇಳಿದರಂತೆ. ನಿನ್ನ ದೃಷ್ಟಿಯಲ್ಲಿ ಈ ಜಗತ್ತಿನ ಮಹಾಪುರುಷ ಯಾರು? ಆತ ತಕ್ಷಣವೇ ‘ನನ್ನ ತಾಯಿ’ ಎಂದು ಉತ್ತರಿಸಿದನಂತೆ. ಆದ್ದರಿಂದ ನಾವೆಲ್ಲರೂ ತಾಯಿ ತಂದೆಯನ್ನು ಗೌರವಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.