ADVERTISEMENT

ವಿಜಯಪುರ | ತುಂಬಿ ಹರಿದ ಹಳ್ಳ: ಸೇತುವೆ ಎತ್ತರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:33 IST
Last Updated 24 ಸೆಪ್ಟೆಂಬರ್ 2025, 4:33 IST
ದೇವರಹಿಪ್ಪರಗಿ ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಿಂದ ಕೊಕಟನೂರ, ಬಮ್ಮನಜೋಗಿ ತಾಂಡಾ, ಇಬ್ರಾಹಿಂಪೂರ ಹಾಗೂ ತಾಂಡಾ, ಜಾಲವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ತುಂಬಿ ಹರಿಯುತ್ತಿರುವ ಹಳ್ಳವನ್ನು  ಗ್ರಾಮಸ್ಥರು ದಾಟುತ್ತಿರುವುದು.
ದೇವರಹಿಪ್ಪರಗಿ ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಿಂದ ಕೊಕಟನೂರ, ಬಮ್ಮನಜೋಗಿ ತಾಂಡಾ, ಇಬ್ರಾಹಿಂಪೂರ ಹಾಗೂ ತಾಂಡಾ, ಜಾಲವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ತುಂಬಿ ಹರಿಯುತ್ತಿರುವ ಹಳ್ಳವನ್ನು  ಗ್ರಾಮಸ್ಥರು ದಾಟುತ್ತಿರುವುದು.   

ದೇವರಹಿಪ್ಪರಗಿ: ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಿಂದ ಕೊಕಟನೂರ, ಬಮ್ಮನಜೋಗಿ ತಾಂಡಾ, ಇಬ್ರಾಹಿಂಪೂರ ಹಾಗೂ ತಾಂಡಾ, ಜಾಲವಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳದ ಸೇತುವೆ ಎತ್ತರಿಸುವಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬಮ್ಮನಜೋಗಿ ಹತ್ತಿರದ ಹಳ್ಳ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತುಂಬಿ ಹರಿಯುತ್ತಿದೆ. ಈ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಪ್ರವಾಹದ ನೀರಿನಲ್ಲಿ ಈಗಾಗಲೇ ಬಹುತೇಕ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಆದರೆ ಬಮ್ಮನಜೋಗಿ ಗ್ರಾಮದಿಂದ ತಾಂಡಾ ಹಾಗೂ ಜಾಲವಾದ, ಇಬ್ರಾಹಿಂಪೂರಗಳಿಗೆ ಬೈಕ್ ಅಥವಾ ಇತರೆ ವಾಹನಗಳ ಮೂಲಕ ತೆರಳುವ ಸಾರ್ವಜನಿಕರು ಅನಿವಾರ್ಯವಾಗಿ ನೀರಿನಮಟ್ಟವನ್ನು ಪರಿಗಣಿಸದೇ ತುಂಬಿ ಹರಿಯುತ್ತಿರುವ ನೀರಿನಲ್ಲಿಯೇ ದಾಟುವ ಹರಸಾಹಸ ಮಾಡಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇದು ಪ್ರತಿವರ್ಷದ ಮಳೆಗಾಲದಲ್ಲಿ ಈ ಭಾಗದ ಜನರಿಗೆ ಅನಿವಾರ್ಯ ಹಾಗೂ ಅಭ್ಯಾಸವಾಗಿದ್ದು ಇವರೆಗೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ADVERTISEMENT

ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಮುನ್ನವೇ ಈ ಹಳ್ಳದ ಸೇತುವೆಯನ್ನು ಎತ್ತರಿಸುವ ಕಾರ್ಯ ಆಗಬೇಕಾಗಿದೆ. ಆದ್ದರಿಂದ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರು ಕೂಡಲೇ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಬಮ್ಮನಜೋಗಿ ಗ್ರಾಮದ ವಿಠ್ಠಲ ಯಂಕಂಚಿ, ಶಿವಶಂಕರ ಕೋಣಶಿರಸಗಿ, ಚಂದ್ರಾಮ ನಂದಗೇರಿ, ಬಸವರಾಜ ಹೊಸಮನಿ, ಶಶಿಕಾಂತ ಸುಂಗಠಾಣ, ತಾಂಡಾದ ಬಾಬು ರಾಠೋಡ, ಹರೀಶ ಚವ್ಹಾಣ, ಆನಂದ ರಾಠೋಡ, ಇಬ್ರಾಹಿಂಪೂರ ಗ್ರಾಮದ ವೀರೇಶ ಹುಣಸಗಿ, ನಾಗು ಕಮತಗಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.