ವಿಜಯಪುರ: ನಗರದ ರಾಮ ಮಂದಿರ ದೇವಾಲಯದ ಹತ್ತಿರವಿರುವ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿಂದ ದಸರಾ ಹಬ್ಬದ ಅಂಗವಾಗಿ 101 ಕೆಜಿ ಬೆಳ್ಳಿಯ ಮೂರ್ತಿ ನಾಡದೇವಿಯ ಅದ್ದೂರಿ ಮೆರವಣಿಗೆ ಮಂಗಳವಾರ ಜರುಗಿತು.
ನಗರದ ರಾಮ ಮಂದಿರ ದೇವಸ್ಥಾನದಿಂದ ಪ್ರಾರಂಬವಾದ ಮೆರವಣಿಗೆ ಅಮೀರ್ ಟಾಕೀಸ್, ಸಿದ್ದೇಶ್ವರ ದೇವಾಲಯ ಗಣಪತಿ ಚೌಕ, ಎಸ್ಎಸ್ ರೋಡ ಮೂಲಕ ಗಾಂಧಿಚೌಕ್ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ತರುಣ ಮಂಡಳಿಯಿಂದ ನಿರ್ಮಿಸಲಾಗಿದ್ದ ‘ದೇಹುಗಾಂವ ಗಾಥಾ ಮಂದಿರ’ದ ಭವ್ಯ ಮಂಟಪಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಕರಾಡ ಶಿವರುದ್ರಾಕ್ಷ ಡೋಲ, ಸೋಲಾಪೂರದ ಲೇಜಿಮ್, ಜಮಖಂಡಿಯ ಬ್ಯಾಂಡ್, ಕರಡಿ ಮಜಲ, ಡೊಳ್ಳು ಕುಣಿತ, ಆನೆ, ಒಂಟಿ, ಕುದುರೆ, ಶಕ್ತಿ ಪ್ರದರ್ಶನಗಳು ನೋಡುಗರ ಗಮನ ಸೆಳೆದವು.
ನಾಡದೇವಿಯ ಬೃಹತ್ ಮರೆವಣಿಗೆಯಲ್ಲಿ ನಾಗಠಾಣದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನೇತ್ರತಜ್ಞ ಪ್ರಭುಗೌಡ ಪಾಟೀಲ, ಸಿದ್ದುಮುತ್ಯ ಹೊಸಮಠ ಅತಿಥಿಗಳಾಗಿ ಭಾಗವಹಿಸಿದ್ದರು. ಗುರುಪಾದಯ್ಯ ಶ್ರೀಶೈಲ ಗಚ್ಚಿನಮಠ ಅವರ ನೇತೃತ್ವ ಮೆರವಣಿಗೆ ಜರುಗಿತು.
ಉತ್ಸವ ಸಮಿತಿಯ ಅಧ್ಯಕ್ಷ ಭಾಗಪ್ಪ ಕನ್ನೋಳ್ಳಿ, ರಾಜು ಮಗಿಮಠ, ಅಪ್ಪು ಡೆಂಗಿ, ಅವೋಘಸಿದ್ಧ ನಾಯ್ಕೋಡಿ, ರಮೇಶ ಜಾನಮಟ್ಟಿ, ಮುತ್ತು ಗಂಗಾಧರ, ಆನಂದ ಮಂಗಳವೇಡೆ, ದತ್ತಾ ಹೊಸಮಠ, ಅರವಿಂದ ಹಿರೇಮಠ, ಅರವಿಂದ ಜಿರಲಿಮಠ, ವಿನೋದ ಹಿರೇಮಠ, ಸೋಮು ಅತನೂರ, ಪಿಂಟು ದರಗೋಡೆ, ಮಹಾಂತೆಶ ಹರವಾಳ, ಮಹೇಂದ್ರ ಸುಣಗಾರ, ಶಶಿ ಮುದುಕಾಮಠ, ಸಂಜು ರುಣವಾಲ, ಶ್ರೀಕಾಂತ ಬಿರಾದರ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.