ADVERTISEMENT

ವಿಜಯಪುರ: ಮಸೂತಿಯಲ್ಲಿ ಲಘು ಭೂಕಂಪ– 2.5 ತೀವ್ರತೆ ದಾಖಲು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:25 IST
Last Updated 1 ಅಕ್ಟೋಬರ್ 2021, 16:25 IST
ವಿಜಯಪುರ: ಮಸೂತಿಯಲ್ಲಿ ಲಘು ಭೂಕಂಪ–  2.5 ತೀವ್ರತೆ ದಾಖಲು
ವಿಜಯಪುರ: ಮಸೂತಿಯಲ್ಲಿ ಲಘು ಭೂಕಂಪ– 2.5 ತೀವ್ರತೆ ದಾಖಲು   

ವಿಜಯಪುರ: ಜಿಲ್ಲೆಯ ಹಲವೆಡೆ ಶುಕ್ರವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡರಿಂದ ಮೂರು ಬಾರಿ ಲಘು ಭೂಕಂಪನವಾಗಿದೆ.

ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಮಧ್ಯಾಹ್ನ 1.47ಕ್ಕೆ 2.5 ರಷ್ಟು ಲಘು ಭೂಕಂಪವಾಗಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಉಳಿದಂತೆ ಕೂಡಗಿ, ತೆಲಗಿ ಹಾಗೂ ಸಿಂದಗಿ ಪಟ್ಟಣದಲ್ಲೂ ಭೂಮಿ ಕಂಪಿಸಿದ ಅನುಭವಾಗಿದೆ. ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಜಿಲ್ಲೆಯ ವಿವಿಧೆಡೆ ಆಗಾಗ ಈ ರೀತಿ ಭೂಕಂಪನ ಅನುಭವ ಆಗುತ್ತಲೇ ಇದೆ. ಸೆಪ್ಟೆಂಬರ್‌ 2ರಂದು ವಿಜಯಪುರದಲ್ಲಿ 3.9 ತೀವ್ರತೆಯಭೂಕಂಪನ ದಾಖಲಾಗಿತ್ತು. ಒಂದು ತಿಂಗಳ ಬಳಿಕ ಮತ್ತೆ ಭೂಕಂಪನದ ಅನುಭವವಾಗಿದ್ದು, ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ಸಂಭವಿಸಿರುವುದು ಲಘು ಭೂಕಂಪ. ಇದಕ್ಕೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.