ADVERTISEMENT

ವಿಜಯಪುರದಲ್ಲಿ ಲಘು ಭೂಕಂಪನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
<div class="paragraphs"><p>ಭೂಕಂಪ&nbsp;</p></div>

ಭೂಕಂಪ 

   

ವಿಜಯಪುರ: ನಗರದಲ್ಲಿ ಮಂಗಳವಾರ 11.41, ರಾತ್ರಿ 12.38 ಮತ್ತು ಬುಧವಾರ ಬೆಳಿಗ್ಗೆ 5.30ಕ್ಕೆ ಮೂರು ಬಾರಿ ಸರಣಿ ಲಘು ಭೂಕಂಪನದ ಅನುಭವವಾಗಿದೆ. 

‘ಗುಡುಗಿದ ಶಬ್ದ ಕೇಳಿಬಂದಿದೆ. ಜೊತೆಗೆ ಭೂಮಿ ಕಂಪಿಸಿದ್ದು, ಭಯದಿಂದ ಜನರು ಮನೆಯಿಂದ ಹೊರಗೆ ಓಡಿಬಂದರು. ಆತಂಕದಲ್ಲೇ ರಾತ್ರಿ ಕಳೆದರು. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ.

ADVERTISEMENT

‘ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ ದಾಖಲಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.