ವಿಜಯಪುರ: ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ನಂಜನಗೂಡು ರಾಘವೇಂದ್ರಸ್ವಾಮಿ ಮಠದಲ್ಲಿ ಭಕ್ತಿ ಪೂರ್ವಕವಾಗಿ ಆರಂಭಗೊಂಡಿತು.
ಸುಪ್ರಭಾತ, ವೇದ ಪಾರಾಯಣ ಜರುಗಿದವು. ಬೆಳಿಗ್ಗೆ ಅಷ್ಟೋತ್ತರ ಸಹಿತ ಫಲಪಂಚಾಮೃತಾಭಿಷೇಕ ನಡೆಯಿತು.
ಗುರುಸಾರ್ವಭೌಮರ ಮಹಿಮೆ ಕುರಿತು ಪ್ರವಚನ ನೀಡಿದ ಪಂಡಿತ ಮಧ್ವೇಶಾಚಾರ್ಯ ಜೋಶಿ ಮುತ್ತಗಿ, ಗುರುಸಾರ್ವಭೌಮರು ಕರುಣಾಮಯಿ, ಭಕ್ತರು ಭಕ್ತಿಯಿಂದ ಕೇಳಿದ ಎಲ್ಲವನ್ನು ಕರುಣಿಸಬಲ್ಲವರು ಎಂದು ಬಣ್ಣಿಸಿದರು.
ಗುರುರಾಯರ ಮೇಲೆ ವಿಶ್ವಾಸವಿಟ್ಟು, ಭಕ್ತಿಯಿಂದ ಸ್ಮರಿಸಿದರೆ ಎಲ್ಲವೂ ದೊರಕಲು ಸಾಧ್ಯ, ನಮ್ಮಲ್ಲಿ ಸಮರ್ಪಣ ಭಾವ ಕ್ಷಮಾ ಸ್ವಭಾವ ಅತ್ಯವಶ್ಯ ಎಂದರು.
ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು. ಅರ್ಚನೆ ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ನಡೆಯಿತು.
ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ಮಠಕ್ಕೆ ಬಂದು ಗುರುಸಾರ್ವಭೌಮರ ವೃಂದಾವನದ ದರ್ಶನ ಪಡೆದು ಪುನೀತರಾದರು.
ಸಂಸದ ರಮೇಶ ಜಿಗಜಿಣಗಿ ಆರಾಧನೆ ಅಂಗವಾಗಿ ಮಠಕ್ಕೆ ಭೇಟಿ ನೀಡಿ ಗುರುಸಾರ್ವಭೌಮರ ದರ್ಶನ ಪಡೆದರು. ವೃಂದಾವನವನ್ನು ಮಠದ ಅರ್ಚಕರಾದ ರವಿ ಆಚಾರ್ಯ, ಶ್ರೀಧರಾಚಾರ್ಯರು ಹಾಗೂ ದಾಮೋದರಾಚಾರ್ಯ ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕರಿಸಿದ್ದರು.
ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕ, ಜಿ.ಎಸ್. ಕುಲಕರ್ಣಿ, ಅಶೋಕ ತಾವರಗೇರಿ, ವಿ. ಬಿ. ಕುಲಕರ್ಣಿ, ವಿಜಯಿಂದ್ರ ಜೋಶಿ, ಗೋವಿಂದ ಸವದತ್ತಿ, ಡಾ.ಪವಮಾನ ಜೋಶಿ, ಶ್ರೀಕೃಷ್ಣ ಪಡಗಾನೂರ, ಬಂಡಾಚಾರ್ಯ ಜೋಶಿ, ಜೆ.ವಿ.ಕಿರಸೂರ, ಸಂತೋಷ ಕೌತಾಳ, ಶ್ರೀಧರ ಜೋಶಿ, ಗಿರೀಶ ಕುಲಕರ್ಣಿ, ಭೀಮಣ್ಣ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.