ADVERTISEMENT

ಬಸವನಬಾಗೇವಾಡಿ: ಮೆಗಾ ಮಾರುಕಟ್ಟೆ ಮಳಿಗೆಗಳು ಹರಾಜು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 13:05 IST
Last Updated 4 ಅಕ್ಟೋಬರ್ 2024, 13:05 IST
ಬಸವನಬಾಗೇವಾಡಿಯ ಮೆಗಾ ಮಾರುಕಟ್ಟೆ ಆವರಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಮೆಗಾ ಮಾರುಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಿತು
ಬಸವನಬಾಗೇವಾಡಿಯ ಮೆಗಾ ಮಾರುಕಟ್ಟೆ ಆವರಣದಲ್ಲಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಮೆಗಾ ಮಾರುಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಿತು   

ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾ ಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಗುರುವಾರ ಸಕ್ಕರೆ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಜರುಗಿತು.

ಮೆಗಾಮಾರುಕಟ್ಟೆಯಲ್ಲಿ ಒಟ್ಟು 134 ವಾಣಿಜ್ಯ ಮಳಿಗೆಗಳಿದ್ದು, ಇದರಲ್ಲಿ ಉಳಿದ 92 ವಾಣಿಜ್ಯ ಮಳಿಗೆಗಳಲ್ಲಿ 10 ವಾಣಿಜ್ಯ ಮಳಿಗೆಗಳು ಹರಾಜು ಆಗಿ 82 ವಾಣಿಜ್ಯ ಮಳಿಗೆಗಳು ಉಳಿದುಕೊಂಡವು. ಹರಾಜು ಆದ 10 ವಾಣಿಜ್ಯ ಮಳಿಗೆಗಳಿಂದ ಒಟ್ಟು ₹1.75 ಕೋಟಿ ಠೇವಣಿ ಮೊತ್ತ ಸಂಗ್ರಹವಾಯಿತು. ವಾಣಿಜ್ಯ ಮಳಿಗೆ ಸಂಖ್ಯೆ ಜಿ-54 ರಿಂದ ಜಿ.61ರ ವರೆಗೆ ಒಟ್ಟು 8 ವಾಣಿಜ್ಯ ಮಳಿಗೆಗಳನ್ನು ಜಿತೇಂದ್ರ ಅಗರವಾಲ ಅವರು ₹1.36 ಕೋಟಿ ಠೇವಣಿ ಮೊತ್ತಕ್ಕೆ ಹಿಡಿದರೆ, ಜಿ.51 ಅನ್ನು ಗಾಯತ್ರಿ ಬಡಿಗೇರ ಅವರು ₹13 ಲಕ್ಷ ಠೇವಣಿ ಮೊತ್ತಕ್ಕೆ, ಜಿ-6 ಅನ್ನು ವೀರಭದ್ರೇಶ್ವರ ಎಲೆಕ್ಟ್ರಾನಿಕ್ ಅಂಗಡಿಯ ಮಾಲೀಕರು ₹6.20 ಲಕ್ಷ ಠೇವಣಿ ಮೊತ್ತಕ್ಕೆ ವಾಣಿಜ್ಯ ಮಳಿಗೆಯನ್ನು ಪಡೆದುಕೊಂಡರು. ಹರಾಜು ಪ್ರಕ್ರಿಯೆಯಲ್ಲಿ 27 ಜನರು ಭಾಗವಹಿಸಿದ್ದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ಜಿಲ್ಲಾ ಪಂಚಾಯಿತಿ ಎಇಇ ವಿಲಾಸ ರಾಠೋಡ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಕಂದಾಯ ನಿರೀಕ್ಷಕಿ ಗೀತಾಂಜಲಿ ದಾಸರ, ಆರೋಗ್ಯ ನಿರೀಕ್ಷಕರಾದ ವಿಜಯ ವಂದಾಲ, ಬಸವರಾಜ ಬೋಳಶೆಟ್ಟಿ, ಇಂಜನಿಯರ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ನಜೀರ ಗಣಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಅನಿಲ ಅಗರವಾಲ, ಸಂಗನಗೌಡ ಚಿಕ್ಕೊಂಡ, ಶೇಖರ ಗೊಳಸಂಗಿ, ಕಮಲಸಾಬ ಕೊರಬು, ರಮೇಶ ಯಳಮೇಲಿ, ಮಲ್ಲೇಶಿ ಕಡಕೋಳ, ಬಸಣ್ಣ ದೇಸಾಯಿ, ಸಿದ್ದಣ್ಣ ಮೋದಿ, ಬಸವರಾಜ ಚೌರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.