ADVERTISEMENT

ವಿಜಯಪುರ: ಜಿಲ್ಲೆಯ 33 ಪ್ರವಾಸಿ ತಾಣಗಳಿಗೆ ಅನುಮೋದನೆ

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಜಾರಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:45 IST
Last Updated 13 ಸೆಪ್ಟೆಂಬರ್ 2025, 5:45 IST
ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ಇಬ್ರಾಹಿಂರೋಜಾ –ಪ್ರಜಾವಾಣಿ ಚಿತ್ರ 
ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ಇಬ್ರಾಹಿಂರೋಜಾ –ಪ್ರಜಾವಾಣಿ ಚಿತ್ರ    

ವಿಜಯಪುರ: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ನ್ನು ರೂಪಿಸಿ ಜಾರಿಗೊಳಿಸಲಾಗಿದ್ದು, ಜಿಲ್ಲೆಯ 33 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿಯಡಿ ಗುರುತಿಸಿ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲು ರಾಜ್ಯದ ಜಿಲ್ಲೆಗಳಿಗೆ ಸಂಬಂಧಿಸಿದ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ರಾಜ್ಯದ 1275 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿ 2024-29ರಡಿ ಸರ್ಕಾರ ಅನುಮೋದನೆ ನೀಡಿದೆ. 

ಜಿಲ್ಲೆಯ ಪ್ರವಾಸಿ ತಾಣಗಳಾದ ಗೋಳಗುಮ್ಮಟ, ಇಬ್ರಾಹಿಂರೋಜಾ, ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಸ್ಥಾನ, ಕುಮಟಗಿ ಬೇಸಿಗೆ ಅರಮನೆ, ಶಿವಗಿರಿ ಶಿವನಮೂರ್ತಿ, ಸಾರಿಪುತ್ರ ಬೋಧಿಧಮ್ಮ ಬೌದ್ಧ ವಿಹಾರ, ಕತಕನಹಳ್ಳಿಯ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಮಠ, ತೊರಗಿ ಗ್ರಾಮದ ನರಸಿಂತಹ ದೇವಸ್ಥಾನ, ಸಂಗೀತ ಮಹಲ್, ತೊರವಿ ಲಕ್ಷ್ಮಿ ದೇವಸ್ಥಾನ, ಕನಮಡಿ ಗ್ರಾಮದ ದರಿದೇವರ ದೇವಸ್ಥಾನ, ಅರಕೇರಿಯ ಅಮೋಘಸಿದ್ದ ದೇವಸ್ಥಾನ.

ADVERTISEMENT

ತಿಕೋಟಾದ ಹಾಜಿಮಸ್ತಾನ ದರ್ಗಾ, ಉಪ್ಪಲದಿನ್ನಿಯ ಸಂಗಮನಾಥ ದೇವಸ್ಥಾನ, ಶೇಗುಣಸಿಯ ಹರಳಯ್ಯನ ಗುಂಡ, ಇಂಗಳೇಶ್ವರದ ಜಗಜ್ಯೋತಿ ಬಸವೇಶ್ವರ ಜನ್ಮಸ್ಥಳ, ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ಆಲಮಟ್ಟಿ ಲಾಲ್‌ ಬಹಾದ್ದೂರ ಶಾಸ್ತ್ರೀ ಆಣೆಕಟ್ಟು, ಯಲಗೂರದ ಯಲಗೂರೇಶ್ವರ ಆಂಜನೇಯ ದೇವಸ್ಥಾನ.

ತಂಗಡಗಿ ಗ್ರಾಮದ ನಿಲಾಂಬಿಕೆ ದೇವಸ್ಥಾನ, ಕೋಳೂರು ಗ್ರಾಮದ ಕೋಟ್ಟೂರು ಬಸವೇಶ್ವರ ದೇವಸ್ಥಾನ ಹಾಗೂ ಈಶ್ವರ ಲಿಂಗ ದೇವಸ್ಥಾನ, ಹೊರ್ತಿಯ ರೇವಣಸಿದ್ಧೇಶ್ವರ ದೇವಸ್ಥಾನ, ಹಿರೇರೂಗಿ ಗ್ರಾಮದ ಶ್ರೀ ಜಟ್ಟಿಂಗೇಶ್ವರ ದೇವಸ್ಥಾನ, ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ದೇವಸ್ಥಾನ, ಹಲಸಂಗಿ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನ.

ಲಚ್ಯಾಣದ ಸಿದ್ದಲಿಂಗ ಮಹಾರಾಜರ ಮಠ, ಯಂಕಂಚಿಯ ದಾವಲ ಮಲೀಕ ದರ್ಗಾ, ಕಡ್ಲೇವಾಡ ಗ್ರಾಮದ ಸೋಮೇಶ್ವರ ದೇವಸ್ಥಾನ, ಚಟ್ಟರಕಿ ಗ್ರಾಮದ ದತ್ತಾತ್ರೇಯ ದೇವಸ್ಥಾನ, ದೇವರಹಿಪ್ಪರಗಿ ಪಟ್ಟಣದ ಮಲ್ಲಯ್ಯ ದೇವಸ್ಥಾನ ಮಡಿವಾಳ ಮಾಚಿದೇವರ ದೇವಸ್ಥಾನ ಮತ್ತು ಧೂಳಖೇಡ ಗ್ರಾಮದ ಶಂಕರಲಿಂಗ ದೇವಸ್ಥಾನವನ್ನು ಗುರುತಿಸಿ ಅನುಮೋದನೆ ನೀಡಲಾಗಿದೆ. 

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಪಾರಂಪರಿಕ ತಾಣಗಳನ್ನು, ಧಾರ್ಮಿಕ ಸ್ಥಳ, ಐತಿಹಾಸಿಕ ದೇವಸ್ಥಾನಗಳು, ದರ್ಗಾಗಳು, ನೈಸರ್ಗಿಕ ತಾಣಗಳನ್ನು ಗುರುತಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ ಜಾಗತಿಕ ಪ್ರವಾಸಿ ತಾಣದ ರೂಪ ನೀಡುವುದು. ಉದ್ಯೋಗ ಸೃಷ್ಟಿಸುವುದು ಪ್ರವಾಸೋದ್ಯಮ ನೀತಿಯ ಉದ್ದೇಶವಾಗಿದೆ.
– ಅರವಿಂದ ಹೂಗಾರ, ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.