ADVERTISEMENT

ವಿಜಯಪುರ | ಗಾಳಿ, ಮಳೆ: ಮೂರು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 15:24 IST
Last Updated 19 ಮೇ 2024, 15:24 IST
ಮುದ್ದೇಬಿಹಾಳದ ಹುಡ್ಕೊ ಗೇಟ್‌ ಮುಂದೆ ಭಾನುವಾರ ಗಾಳಿ–ಮಳೆಗೆ ಮರವೊಂದು ರಸ್ತೆ ಮೇಲೆ ಬಿದ್ದಿದೆ
ಮುದ್ದೇಬಿಹಾಳದ ಹುಡ್ಕೊ ಗೇಟ್‌ ಮುಂದೆ ಭಾನುವಾರ ಗಾಳಿ–ಮಳೆಗೆ ಮರವೊಂದು ರಸ್ತೆ ಮೇಲೆ ಬಿದ್ದಿದೆ   

ವಿಜಯಪುರ: ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ರಭಸದ ಗಾಳಿಯೊಂದಿಗೆ ಸುರಿದ ಮಳೆಯ ಪರಿಣಾಮ ಮೂರು ಮನೆಗಳಿಗೆ ಹಾನಿಯಾಗಿದೆ.

ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದ ರವಿ ಪವಾರ ಅವರ ಮನೆ ಛಾವಣಿ ಬಿದ್ದು, ಭಾಗಶ ಹಾನಿಯಾಗಿದೆ. ಕೊಲ್ಹಾರ ತಾಲ್ಲೂಕಿನ ಬಳೂತಿ ಗ್ರಾಮದಲ್ಲಿ ಅಮರಪ್ಪ ಮಾಳೇದ ಮತ್ತು ರಾಯವ್ವ ಕೋಲಕಾರ ಅವರ ಮನೆಗಳ ಗೋಡೆ ಭಾಗಶಃ ಕುಸಿದು ಬಿದ್ದಿವೆ.

ಭಾನುವಾರ ಸಂಜೆ ಸಿಂದಗಿ, ಕಲಕೇರಿ, ತಾಳಿಕೋಟೆ ಮತ್ತು ಮುದ್ದೇಬಿಹಾಳ, ಬಸವನ ಬಾಗೇವಾಡಿಯಲ್ಲಿ ಗುಡುಗು, ಸಿಡಿಲು, ಗಾಳಿಯೊಂದಿಗೆ ಉತ್ತಮ ಮಳೆ ಸುರಿಯಿತು. 

ADVERTISEMENT

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಹೊಲದತ್ತ ಮುಖಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.