ADVERTISEMENT

ಗೃಹಲಕ್ಷ್ಮಿ ಹಣದಲ್ಲಿ ಶಾಸಕ ಮನಗೂಳಿ, ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 20:42 IST
Last Updated 6 ಜನವರಿ 2025, 20:42 IST
ತಾಂಬಾ ಸಮೀಪದ ಗೂಗಿಹಾಳ ಗ್ರಾಮದ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಅವರು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಹೋಳಿಗೆ ಊಟದ ತುತ್ತು ನೀಡಿದರು
ತಾಂಬಾ ಸಮೀಪದ ಗೂಗಿಹಾಳ ಗ್ರಾಮದ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಅವರು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರಿಗೆ ಹೋಳಿಗೆ ಊಟದ ತುತ್ತು ನೀಡಿದರು   

ವಿಜಯಪುರ: ತಾಂಬಾ ಸಮೀಪದ ಗೂಗಿಹಾಳ ಗ್ರಾಮದ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಾಬೂಬಿ ಅಬ್ಬಾಸಲಿ ಚೌಧರಿ ಅವರು ಗೃಹಲಕ್ಷ್ಮಿ ಹಣ ಉಳಿಸಿ, ಸಿಂದಗಿ ಶಾಸಕ ಅಶೋಕ ಮನಗೂಳಿ ಮತ್ತು ಸಮಸ್ತ ಗ್ರಾಮಸ್ಥರಿಗೆ ಸೋಮವಾರ ಹೋಳಿಗೆ ಊಟ ಮಾಡಿಸಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಜನ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿ, ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎನ್ನುವ ವಿಪಕ್ಷದವರಿಗೆ ಸೂಕ್ತ ಉತ್ತರ ನೀಡಿ, ಸ್ವಾವಲಂಬಿ ಕರ್ನಾಟಕ ರೂಪುಗೊಳ್ಳುತ್ತಿದೆ’ ಎಂದರು.

ಫಲಾನುಭವಿ ಮಾಬೂಬಿ ಅಬ್ಬಾಸಲಿ ಮಾತನಾಡಿ, ‘ಹಳಸದ ಅನ್ನವಿಲ್ಲ. ಅದು ಹಳಸುವ ಮುನ್ನ ಊಟ ಮಾಡಬೇಕು. ಬಾಡದ ಹೂವಿಲ್ಲ, ಅದು ಬಾಡುವ ಮುನ್ನ ಮುಡಿಯಬೇಕು. ಕೆಡಲಾರದ ಹಣ್ಣುಗಳಿಲ್ಲ, ಅವು ಕೆಡುವ ಮುನ್ನ ಸೇವಿಸಬೇಕು. ಸಾಯದ ಮನುಷ್ಯನಿಲ್ಲ, ಸಾಯುವ ಮುನ್ನ ಕೀರ್ತಿ ಪಡೆಯಬೇಕು’ ಎಂದರು.

ADVERTISEMENT

ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಶ್ರೀಶೈಲ ಕವಲಗಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹಮ್ಮದ ಅತ್ತಾರ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಜಯಶ್ರೀ ಹಂದನೂರ, ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ ಚಿಕ್ಕಗಸಿ, ಪರಸು ಬಿಸನಾಳ, ರಾಚ್ಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಸಿದ್ದು ಹತ್ತಳ್ಳಿ, ಕಾಂತನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.