ADVERTISEMENT

ಅಪ್ಪನ ಸ್ಮರಣೆ ಮರೆಯದ ಶಾಸಕ ಯಶವಂತರಾಯಗೌಡ ಪಾಟೀಲ: ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:39 IST
Last Updated 15 ಆಗಸ್ಟ್ 2025, 5:39 IST
ಇಂಡಿ ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ಲಿ. ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲ ಪುಣ್ಯಸ್ಮರಣೆ ಹಾಗೂ ಧಾಮರ್ಿಕ ಸಭೆಯನ್ನು ನಾಡಿನ ಮಠಾಧೀಶರು ಉದ್ಘಾಟಿಸಿದರು.    
ಇಂಡಿ ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ಲಿ. ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲ ಪುಣ್ಯಸ್ಮರಣೆ ಹಾಗೂ ಧಾಮರ್ಿಕ ಸಭೆಯನ್ನು ನಾಡಿನ ಮಠಾಧೀಶರು ಉದ್ಘಾಟಿಸಿದರು.       


ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲರ ತಂದೆ ದಿ.ವಿಠ್ಠಲಗೌಡ ಪಾಟೀಲ ಧರ್ಮದ ದೀಪ ಹಚ್ಚಿದ ಮಹಾಪುರುಷರಾಗಿದ್ದರು. ಜನ ಸಾಮಾನ್ಯರ, ಬಡವರ ಹೃದಯ ಗೆದ್ದ ತಾಯ್ತನದ ಹೃದಯ ಸಾಮ್ರಾಟರಾಗಿದ್ದ ಅವರು ನೊಂದ ಜನರಿಗೆ ಆಸರೆ ನೀಡಿದ ಅಪದ್ಭಾಂದವ ಎಂದು ಖೇಡಗಿ ಮಠದ ಶಿವಬಸವರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬುಧವಾರ ಸಾಯಂಕಾಲ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ಲಿ. ವಿಠ್ಠಲಗೌಡ ವೈ. ಪಾಟೀಲ ಇವರ ಪುಣ್ಯಸ್ಮರಣೆ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿಠ್ಠಲಗೌಡ ಪಾಟೀಲ ಅವರ ನ್ಯಾಯ, ನೀತಿ, ಧರ್ಮದ ದೀಪ ಇಂದಿಗೂ ಬೆಳಗುತ್ತಿದೆ ಎಂದರು.

ADVERTISEMENT

ಶಾಸಕ ಯಶವಂತರಾಯಗೌಡ ಪಾಟೀಲ ತಂದೆಯಂತೆ ಬಡವರ, ದೀನದಲಿತರನ್ನು ಕಂಡು ಮಮ್ಮಲ ಮರಗುವ ಗುಣ, ಸಾಧು ಸಂತರನ್ನು, ಕಾವಿಗಳನ್ನು ಕಂಡರೆ ಬಾಗಿದ ತಲೆ, ಮುಗಿದ ಕೈ ಇದು ತಂದೆಯಿಂದ ಬಂದ ಸಂಸ್ಕಾರ. ಎಷ್ಟೋ ಮಕ್ಕಳು ತಿಥಿ ಮಾಡಿದ ನಂತರ ತಂದೆ-ತಾಯಿಗಳನ್ನು ಮರೆಯುತ್ತಾರೆ. 38 ವರ್ಷಗಳ ನಿರಂತರ ತಂದೆಯ ಸ್ಮರಣೆ ಮಾಡುವ ಶಾಸಕ ಇನ್ನೊಬ್ಬರಿಲ್ಲ ಎಂದರು.

ಬಂಥನಾಳ ಗ್ರಾಮದ ವೃಷಭಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.  ಗೋಪಾಲಶಾಸ್ತ್ರಿ, ಪಾಸ್ಟರ್ ಯೇಶಾಯ್, ಮೌಲಾನಾ ಶಾಕೀರಹುಸೇನಿ ಖಾಸ್ಮೀ, ವರಂಜ್ಯೋತಿ ಬಂತೇಜಿ ಮಾತನಾಡಿದರು.

ಪಂಚಾಕ್ಷರಿ ಶಿವಾಚಾರ್ಯ, ಶಿವಬವರಾಜೇಂದ್ರ ಶಿವಯೋಗಿಗಳು, ಗುರುಪಾದೇಶ್ವರ ಸ್ವಾಮೀಜಿಗಳು, ಶಿವಲಿಂಗೇಶ್ವರ ಸ್ವಾಮೀಜಿ, ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಅಭಿನವ ಪ್ರಭುಲಿಂಗೇಶ್ವರ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ, ಶಿವಯೋಗೇಶ್ವರ ಸ್ವಾಮೀಜಿಗಳು, ಸ್ವರೂಪಾನಂದ ಸ್ವಾಮೀಜಿ, ನಿರಂಜನ ದೇವರು, ಮುರುಘರಾಜೇಂದ್ರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಮದ್ದಾನಿ ಮಹಾರಾಜರು, ಸುಗಲಾತಾಯಿ ಅಮ್ಮನವರು, ಪ್ರಕಾಶ ಮಹಾರಾಜ, ಯಲ್ಲಾಲಿಂಗ ಮಹಾರಾಜರು, ಪೌರಾಗಡದ ಸಂತೋಷ ಮಹಾರಾಜರು ಸೇರಿದಂತೆ ಸರ್ವಧರ್ಮಗಳ ಮಠಾಧೀಶರು, ಸಂತ, ಮಹಾಂತರು ವೇದಿಕೆಯಲ್ಲಿದ್ದರು.

ವಿಶ್ರಾಂತ ಉಪನ್ಯಾಸಕ ಎ.ಪಿ.ಕಾಗವಾಡಕರ್ ಸ್ವಾಗತಿಸಿದರು. ಅರಣ್ಯ ಇಲಾಖೆಯ ಅಧಿಕಾರಿ ಧನರಾಜ ಮುಜಗೊಂಡ ನಿರೂಪಿಸಿ, ವಂದಿಸಿದರು. ಶಾಸಕ ಯಶವಂತರಾಯಗೌಡ ಪಾಟೀಲ, ಬಸವಂತರಾಯಗೌಡ ಪಾಟೀಲ,  ವಿಠ್ಠಲಗೌಡ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.