ಚಡಚಣ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ ಆರ್ಥಿಕ ದಿವಾಳಿ,ಕುಸಿದ ಕಾನೂನು ವ್ಯವಸ್ಥೆ,ಸಾಮಾಜಿಕ ನ್ಯಾಯದ ತುಷ್ಠೀಕರಣ ಹಾಗೂ ಶೂನ್ಯ ಅಭೀವೃದ್ಧಿಯಾಗಿದೆ ಎಂದು ಚಡಚಣ ಮಂಡಳ ಬಿಜೆಪಿ ಘಟಕದ ಅಧ್ಯಕ್ಷ ಕಾಂತುಗೌಡ ಪಾಟೀಲ ಹೇಳಿದರು.
ಸ್ಥಳಿಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರವೆಂದರೆ ಭ್ರಷ್ಟಾಚಾರದ ಕೂಪ,ಕಮಿಷನ್ ಸರ್ಕಾರವಾಗಿದ್ದು,ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ ಎಂಬುದೇ ನಾಚಿಕೆಗೇಡು ಎಂದರು.
ಮುಖಂಡ ಸಂಜು ಐಹೊಳಿ ಮಾತನಾಡಿ,ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸುವದಲ್ಲದೆ ಮುಸ್ಲಿಂ ಓಲೈಕೆಗೆ ಹಣವನ್ನು ವರ್ಗಾಯಿಸಿದೆ.ಮುಖ್ಯಮಂತ್ರಿಗಳಿಂದ ಹಿಡಿದು ಕಾಂಗ್ರೆಸ್ ನಾಯಕರೆಲ್ಲ ಬ್ರಷ್ಠಾಚಾರ ಹಗರಣಗಳ್ಲಲಿ ತೊಡಗಿದ್ದಾರೆ.ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ,ಮಹಿಳೆಯರ ಮೇಲೆ ಅತ್ಯಾಚಾರಗಳು,ಭಾರತ ವಿರೋದಿ ನೀತಿ ಹಾಗೂ ,ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ದೇಶ ವಿರೋಧಿ ಚಟುವಕೆಗಳಿಗೆ ಪ್ರೋತ್ಸಾಹವೇ ಇವರ ಎರಡು ವರ್ಷಗಳ ಸಾಧನೆಯಾಗಿದೆ.ಪೆಟ್ರೋಲ್,ಡಿಸೆಲ್,ಮಧ್ಯದ ಬೆಲೆಗಳು ಗಗನಕ್ಕೇರಿವೆ,ವಿವಿಧ ತೆರಿಗೆ,ಶುಲ್ಕಗಳು ಮಧ್ಯಮ ಹಾಗೂ ಬಡಜನರ ಬದುಕನ್ನು ಬೀದಿಗೆ ತಂದಿದೆ ಎಂದ ಅವರು,ನೀರಾವರಿ ಯೋಜನೆಗಳು,ರೈತರಿಗೆ ನೀಡಬೇಕಾದ ಸಬ್ಸಿಡಿ ನಿಲ್ಲಿಸಿವೆ.ಈ ರೈತ ವಿರೋಧಿ ಸರ್ಕಾರ ಶೀಘ್ರ ತೊಲಗಬೇಕು ಎಂದರು.
ಬಿಜೆಪಿ ಮಂಡಳ ಯುವ ಮೋರ್ಚಾ ಅಧ್ಯಕ್ಷ ಕೇದಾರಿ ಸಾಳುಂಕೆ ಮಾತನಾಡಿ,ನಮ್ಮ ಸೈನಿಕರ ಹಾಗೂ ಆಪರೇಷನ್ ಸಿಂಧೂರ ಬಗ್ಗೆ ಕೆಲ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿರುವದು ನಾಚಿಕೆಗೇಡು.ಅಂತಹ ನಾಯಕರನ್ನು ಗಲ್ಲಿಗೇರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪ ಕೇಲ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.