ADVERTISEMENT

ಆರ್‌ಎಂಪಿ ವೈದ್ಯರು ಗ್ರಾಮೀಣರ ನಿಜವಾದ ಸೇವಕರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 7:45 IST
Last Updated 15 ಮಾರ್ಚ್ 2011, 7:45 IST

ಗುರುಮಠಕಲ್:  ಗ್ರಾಮೀಣ ಪ್ರದೇಶ ದಲ್ಲಿ ವೃತ್ತಿಯನ್ನು ಸಲ್ಲಿಸುತ್ತಿರುವ ವೈದ್ಯರುಗಳು (ಆರ್‌ಎಂಪಿ) ನಿಜವಾದ ಸೇವೆಯನ್ನು ನೀಡುವ  ಜನಪರ ವೈದ್ಯ ರಾಗಿದ್ದಾರೆ ಎಂದು ಆರ್‌ಎಂಪಿ ವೈದ್ಯರ ಸಂಘದ ರಾಜ್ಯ ಅಧ್ಯಕ್ಷ ಪಿ.ಕೆ.ಕುಮಾರ ಹೇಳಿದರು.

ಅವರು ಭಾನುವಾರ ಪಟ್ಟಣದ ಸಾಮ್ರಾಟ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾದ ಗ್ರಾಮೀಣ ವೃತ್ತಿನಿರತ ವೈದ್ಯರ (ಆರ್‌ಎಂಪಿ) ಸಭೆಯಲ್ಲಿ ಭಾಗ ವಹಿಸಿ ಮಾತನಾಡಿ, ಸರ್ಕಾರಿ ವೈದ್ಯರ ಸೇವೆ ಕೇವಲ ಸಮಯಕ್ಕೆ ಮೀಸಲಾ ಗಿದೆ. ಗ್ರಾಮೀಣ ಭಾಗದಲ್ಲಿ ಯಾವತ್ತು ಖಾಲಿ ಇರುವ ಆಸ್ಪತ್ರೆ ಗಳಿಂದಾಗಿ ಜನರಿಗೆ ಸೇವೆ ಸಿಗದಂತಾ ಗಿದೆ. ಜನರ ಮನೆಗಳಿಗೆ ತೆರಳಿ ಉಪಚಾರ ದೊಂದಿಗೆ ಔಷಧಿಗಳನ್ನು ಪುರೈಸಿ ಸೇವೆ ಯನ್ನು ನೀಡುವುದು ಕೇವಲ ಆರ್‌ಎಂಪಿ ವೈದ್ಯರು ಮಾತ್ರ ಎಂದು ಅಭಿಪ್ರಯಪಟ್ಟರು.

ಪಟ್ಟಣಗಳ ಖಾಸಗಿ ಆಸ್ಪತ್ರೆಯಲ್ಲಿ ಅದೇ ಮಾತ್ರೆ, ಅದೇ ಉಪಚಾರಕ್ಕೆ ಮನಬಂದಂತೆ ಜನರನ್ನು ಸುಲಿಗೆ ಮಾಡುವಲ್ಲಿ ಮುಂದಾಗಿವೆ. ಅದರಿಂದ ರಕ್ಷಿಸಿ ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತೆವೆ. ಯಾವುದೇ ಕಾರಣಕ್ಕು ಕೇವಲ ಹಣ ಸುಲಿಗೆಗಾಗಿ ಉಪಚಾರ ಮಾಡುವುದು, ದುಷ್ಚಟಗಳಿಗೆ ಬಲಿ ಯಾಗದೆ ವೃತ್ತಿಗೆ ಗೌರವ ತರುವ ರೀತಿಯಲ್ಲಿ ಸೇವೆ ಸಲ್ಲಿಸಿರಿ ಎಂದು ಹೇಳಿದರು. 

ಆರ್‌ಎಂಪಿ ಸಂಘದ ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನಾಗಿ ಅನಂತಯ್ಯ ಯಲಸತ್ತಿ, ಗುರುಮಠಕಲ್ ಅಧ್ಯಕ್ಷರ ನ್ನಾಗಿ ಎಸ್.ಕೆ.ರೆಡ್ಡಿ ಹಾಗೂ ಸೇಡಂ ಅಧ್ಯಕ್ಷರಾಗಿ ಕಿಷ್ಟಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಮಹಾಂತೇಶ ಪಾಟೀಲ, ಅಯಮ್‌ಖಾನ್ ಇದ್ದರು. ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳ  ಸುಮಾರು ನೂರಕ್ಕು ಹೆಚ್ಚು ವೈದ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.