ADVERTISEMENT

ಕೇಂದ್ರ ಸಚಿವರ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:45 IST
Last Updated 9 ಅಕ್ಟೋಬರ್ 2012, 9:45 IST

ಯಾದಗಿರಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ ಹೇಳಿಕೆಯಿಂದ ಹಿಂದು ಧರ್ಮಿಯರ ಭಾವನೆಗಳಿಗೆ ನೋವುಂಟು ಮಾಡಿದ್ದು, ಕೂಡಲೇ ಹೇಳಿಕೆ ಹಿಂದಕ್ಕೆ ಪಡೆಯಬೇಕು ಎಂದು ಎಂದು ಸಂಘ-ಸಂಸ್ಥೆಗಳು ಒತ್ತಾಯಿಸಿವೆ.

ಜನಪ್ರತಿನಿಧಿಯಾಗಿರುವ ಜೈರಾಮ್ ರಮೇಶ ಈ ರೀತಿ ಹೇಳಿಕೆ ನೀಡುವುದನ್ನು ನೋಡಿದರೆ, ಹಿಂದು ಧರ್ಮದ ಬಗ್ಗೆ ಅವರಿಗೆ ಯಾವುದೇ ತಿಳಿವಳಿಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಶಿವುಕುಮಾರ ಕೊಂಕಲ್ ಹೇಳಿದ್ದಾರೆ.

ಸನಾತನ ಧರ್ಮವಾದ ಹಿಂದು ಸಂಸ್ಕೃತಿಯು ಇಡೀ ವಿಶ್ವಕ್ಕೆ ತಾಯಿ ಇದ್ದಂತೆ ಎಂದು ಅನೇಕ ದಾರ್ಶನಿಕರು ಹೇಳಿದ್ದಾರೆ. ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿಯನ್ನು ಅಧ್ಯಯನ ಮಾಡಲು ಭಾರತಕ್ಕೆ ಬರುತ್ತಾರೆ. ಅಂಥದ್ದರಲ್ಲಿ ಭಾರತದಲ್ಲಿ ಶೌಚಾಲಯಕ್ಕಿಂತ ದೇವಸ್ಥಾನಗಳೇ ಹೆಚ್ಚಾಗಿವೆ ಎಂದು ಸಚಿವರು ಹೇಳಿರುವುದು ಒಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿದೆ. ಅವರು ಕ್ಷಮೆ ಕೋರಬೇಕು ಎಂದು ಕರವೇ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ ಆಗ್ರಹಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ದೇವಾಲಯಗಳನ್ನು ಶೌಚಾಲಯಗಳಿಗೆ ಹೋಲಿಸಿರುವುದು ಮೂರ್ಖತನದ ಪರಮಾವಧಿ ಎಂದು ಕನಕ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಣ್ಣ ಜಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಾಮ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ, ಕೆಎಂಸಿ ಅಧ್ಯಕ್ಷ ಮಹ್ಮದ್ ಖುರೇಸಿ, ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಗೊವಿಂದ ಕಾಡಂಗೇರಾ, ನೇತಾಜಿ ಯುವ ಸೇನೆಯ ಉಪಾಧ್ಯಕ್ಷ ಬಸ್ಸುಗೌಡ ತೆಗ್ಗಿನಮನಿ ಮುಂತಾದವರು ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.