ADVERTISEMENT

ದಲಿತ, ರೈತ ಚಳವಳಿ ದಿಕ್ಕು ತಪ್ಪಿವೆ- ಅಮಿನ್‌ಮಟ್ಟು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2011, 9:10 IST
Last Updated 28 ಮಾರ್ಚ್ 2011, 9:10 IST
ದಲಿತ, ರೈತ ಚಳವಳಿ ದಿಕ್ಕು ತಪ್ಪಿವೆ- ಅಮಿನ್‌ಮಟ್ಟು
ದಲಿತ, ರೈತ ಚಳವಳಿ ದಿಕ್ಕು ತಪ್ಪಿವೆ- ಅಮಿನ್‌ಮಟ್ಟು   

ಯಾದಗಿರಿ: ದಲಿತರು, ದಲಿತೇತರರ ನಡುವಿನ ಭಿನ್ನಾಭಿಪ್ರಾಯಗಳು ಕನ್ನಡ ಚಳವಳಿಯ ದಿಕ್ಕು ತಪ್ಪಿಸಿವೆ ಎಂದು ‘ಪ್ರಜಾವಾಣಿ’ ಪತ್ರಿಕೆಯ ಸಹಾಯಕ ಸಂಪಾದಕ ದಿನೇಶ ಅಮಿನ್‌ಮಟ್ಟು ವಿಷಾದ ವ್ಯಕ್ತಪಡಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ಭಾನುವಾರ ಇಲ್ಲಿಯ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾ ಗಿದ್ದ ಜಿಲ್ಲಾ ಮಟ್ಟದ ಸಾಹಿತ್ಯ ಸಮಾ ವೇಶದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ಜಾಗತೀಕರಣ ಮತ್ತು ಸಾಮಾಜಿಕ ಚಳವಳಿಗಳ ತಲ್ಲಣಗಳು’ ವಿಷಯವಾಗಿ ಉಪನ್ಯಾಸ ನೀಡಿದರು.
 

ಕಾವೇರಿ ವಿಷಯ ಬಂದಾಗ ಉದ್ರೇಕಗೊಳ್ಳುವವರು, ಕೃಷ್ಣಾ, ತುಂಗಭದ್ರಾ ವಿಷಯ ಬಂದಾಗ ಮಾತನಾಡುವುದಿಲ್ಲ. ಎಲ್ಲೋ ಒಂದು ಕಡೆ ಕನ್ನಡ ಚಳವಳಿಗಳು ತಮಿಳು, ಮರಾಠಿ ವಿರೋಧಿ ಚಳವಳಿಗಳ ರೂಪ ಪಡೆಯುತ್ತಿರುವಂತೆ ಭಾಸವಾಗುತ್ತದೆ ಎಂದು ಹೇಳಿದರು. ಕಳೆದ ಶತಮಾನದ ಅರ್ಧಭಾಗ ವನ್ನು ಸ್ವಾತಂತ್ರ್ಯ ಪಡೆಯಲು, ಇನ್ನರ್ಧ ಭಾಗವನ್ನು ಭಾರತ ಕಟ್ಟಲು ವ್ಯಯಿ ಸಿದ್ದೇವೆ. ಆದರೆ ಎಂತಹ ಭಾರತವನ್ನು ಕಟ್ಟಿದ್ದೇವೆ ಎಂಬುದರ ಬಗ್ಗೆ ಅವ ಲೋಕನ ಮಾಡಬೇಕಾಗಿದೆ ಎಂದ ಅವರು, ಪ್ರಜಾಪ್ರಭುತ್ವ ಎಲ್ಲಿಯೋ ಹಾದಿ ತಪ್ಪುತ್ತಿದೆಯೇ ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿದೆ ಎಂದರು.
 

ರೈತ ಚಳವಳಿಗಳು ವಿಫಲವಾಗಲು ಹಲವಾರು ಕಾರಣಗಳಿವೆ. ರೈತನನ್ನು ಬೆಳೆಗಾರನ ಆಚೆ ನೋಡುವ ಪ್ರಯತ್ನ ಮಾಡಲಿಲ್ಲ. ಆತನನ್ನು ಸಾಮಾಜಿಕ ಶೋಷಿತ ಎನ್ನುವ ಬದಲು ಆರ್ಥಿಕ ಶೋಷಿತ ಎಂದು ಬಿಂಬಿಸಲಿಲ್ಲ. ಇದರ ಜೊತೆಗೆ ಸಮಾಜದ ಸಹಾನುಭೂತಿ ಗಳಿಸಲು ಯತ್ನಿಸದೇ, ಸರ್ಕಾರವನ್ನು ಹೆದರಿಸುವ, ಮುಗಿಸುವ ಪ್ರಯತ್ನಕ್ಕೆ ಬಿದ್ದು, ರೈತ ಚಳವಳಿಯನ್ನು ಕಾರ್ಮಿಕ ಚಳವಳಿ ರೀತಿಯಲ್ಲಿ ಮುನ್ನಡೆಸಿದ್ದು ಇದಕ್ಕೆ ಕಾರಣ ಎನ್ನಬಹುದು ಎಂದು ವಿಶ್ಲೇಷಿಸಿದರು.
 

ADVERTISEMENT

ಅಧಿಕಾರಿಶಾಹಿಯನ್ನು ಮಣಿಸಿದ್ದೇ ರೈತ ಚಳವಳಿಯ ಬಹುದೊಡ್ಡ ಸಾಧನೆ ಎಂದ ಅವರು, ರೈತ ಸಂಘದ ಆಂತರ್ಯದಲ್ಲಿ ವಿರೋದಾಭಾಸ ಗಳಿವೆ. ರೈತ ಚಳವಳಿಯ ಅವನತಿಗೆ ಹೊರಗಿನ ಶತ್ರುಗಳೆಷ್ಟು ಕಾರಣವೋ, ಒಳಗಿನ ಶತ್ರುಗಳು ಅಷ್ಟೇ ಕಾರಣ ಎಂದು ಹೇಳಿದರು. ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸದೇ ರಾಜಕೀಯ ಆಕಾಂಕ್ಷಿ ಗಳಿಂದಾಗಿ ದಲಿತ ಚಳವಳಿಗೆ ಹಿನ್ನಡೆಗೆ ಕಾರಣವಾಯಿತು. ಹೋರಾಟದಲ್ಲಿ ಹಣ್ಣಾಗಿದ್ದ ದಲಿತ ನಾಯಕರು ಅಧಿ ಕಾರದ ಬೆಚ್ಚನೆಯ ಹಾದಿ ತುಳಿದರು. ಬಹಳಷ್ಟು ದಲಿತ ನಾಯಕರು ರಾಜ ಕೀಯದತ್ತ ವಾಲಿದರು. ಶೋಷಿತರ ವೇದಿಕೆಯಾಗಿದ್ದ ದಲಿತ ಸಂಘಟನೆ,  ಅಧಿಕಾರ ಶಾಹಿಯಾಗಿ ಪರಿವರ್ತಿತ ವಾಯಿತು ಎಂದು ತಿಳಿಸಿದರು.
 

ಪ್ರಜಾಪ್ರಭುತ್ವ ವ್ಯವಸ್ಥೆಯ ಕೇಂದ್ರ ಬಿಂದುವಾದ ಪ್ರಜೆ ಭ್ರಷ್ಟನಾದರೆ, ಉಳಿದೆಲ್ಲ ಪರಿಕರಗಳು ವ್ಯರ್ಥವಾಗು ತ್ತವೆ ಎಂದು ಹೇಳಿದ ಅವರು, ಈ ಕುರಿತು ಅವಲೋಕನ ಮಾಡುವ ನಿಟ್ಟಿ ನಲ್ಲಿ ಇಂತಹ ಚರ್ಚಾಗೋಷ್ಠಿಗಳು, ವಿಚಾರ ಸಂಕಿರಣಗಳು ಸಣ್ಣ ಪ್ರಮಾಣ ದಲ್ಲಿಯಾದರೂ ಸಹಕಾರಿ ಆಗಬಲ್ಲವು ಎಂದು ಅಭಿಪ್ರಾಯಪಟ್ಟರು. ಸಂಪ್ರದಾಯ ಮತ್ತು ವೈಜ್ಞಾನಿಕ ಪ್ರಜ್ಞೆಯ ಮುಖಾಮುಖಿ ಕುರಿತು ಮಾತನಾಡಿದ ಪತ್ರಕರ್ತ ಶಿವಸುಂದರ, ಸಜ್ಜನರ ನಿಷ್ಕ್ರಿಯತೆಯಿಂದಾಗಿ ಇಂದು ಸಮಾಜ ಕೆಡುತ್ತಿದೆ. ಶ್ರೀಮಂತರು ಮಾತ್ರ ಶ್ರೀಮಂತರಾಗಬೇಕು ಎನ್ನುವ ಸಿದ್ಧಾಂತ, ಹಿಂದೂತ್ವದ ಆತಂಕ, ಗೊಂದಲದ ಆತಂಕಗಳು ಬೆಳೆಯದಂತೆ ನೋಡಿಕೊಂಡಾಗ ಮಾತ್ರ ಮೌಢ್ಯ ವನ್ನು ಬದಲಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ನಮ್ಮ ಕೈಯಿಂದಲೇ ನಮ್ಮ ಕಣ್ಣು ಚುಚ್ಚುವ ಕೆಲಸ ಮಾಡಲಾಗುತ್ತಿದೆ. ಪ್ರಸಕ್ತ ದಿನಗಳಲ್ಲಿ ಪರೋಕ್ಷ ತೆರಿಗೆಯ ಪಾಲು ಹೆಚ್ಚುತ್ತಿದ್ದು, ನೇರ ತೆರಿಗೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡ ವಾಳಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ ಅಭಿವೃದ್ಧಿಯೇ ಇಂದು ರಾಜ್ಯ ಅಭಿವೃದ್ಧಿ ಆಗಿರುವುದು ದುರ್ದೈವದ ಸಂಗತಿ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳು, ವಿದ್ಯಾರ್ಥಿ ಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಿದ್ಧಪ್ಪ ಲಿಂಗೇರಿ ಸ್ವಾಗತಿಸಿದರು. ಮಲ್ಲೇಶಿ ಕುರಕುಂದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.