ADVERTISEMENT

ನ್ಯಾಯಸಮ್ಮತ ಚುನಾವಣೆಗೆ ಸಿದ್ಧತೆ

ಶಹಾಪುರದಲ್ಲಿ 261 ಮತಗಟ್ಟೆ: ಚುನಾವಣಾಧಿಕಾರಿ ನವೀನ್‌ ಜೋಸೆಫ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 14:21 IST
Last Updated 3 ಏಪ್ರಿಲ್ 2018, 14:21 IST

ಶಹಾಪುರ: ಶಹಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 261 ಮತಗಟ್ಟೆಗಳಿವೆ. ಒಟ್ಟು ಮತದಾರರು 2,20,458 ಮತದಾರರು ಇದ್ದು, ಅದರಲ್ಲಿ ಪುರುಷ ಮತದಾರರು 1,10,565, ಮಹಿಳೆಯರು 1,09,867, 26 ತೃತೀಯ ಲಿಂಗಿಗಳು ಇದ್ದಾರೆ ಎಂದು ಶಹಾಪುರ ಮತಕ್ಷೇತ್ರದ ಚುನಾವಣೆ ಅಧಿಕಾರಿ ನವೀನ್‌ ಜೋಸೆಫ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕ್ಷೇತ್ರದಲ್ಲಿ 19 ಮಾದರಿ ನೀತಿ ಸಂಹಿತೆಯ ತಂಡವನ್ನು ರಚಿಸಲಾಗಿದೆ. ಅದರಲ್ಲಿ ಸಿ.ಎ.ದೇಶಪಾಂಡೆ ವಾಣಿಜ್ಯ ಅಧಿಕಾರಿ (ಮೊ: 9449244395), ಬಿಸಿಯೂಟ ಯೋಜನಾ ಸಹಾಯಕ ನಿರ್ದೇಶಕ ಅಧಿಕಾರಿ ಬಸವರಾಜ (ಮೊ: 9845174529), ಮೀನುಗಾರಿಕೆ ಇಲಾಖೆಯ ರಮೇಶ ಯರಗಲ್ (ಮೊ: 8670893121), ಜೆಸ್ಕಾಂ ಅಧಿಕಾರಿ ಶಾಂತಪ್ಪ ಪೂಜಾರಿ (ಮೊ: 94850346977) ಮುಡಬೂಳ ಪ್ರೌಢಶಾಲೆಯ ಮುಖ್ಯಗುರು ಹಣಮಂತ ( ಮೊ: 9845581054), ಮುಖ್ಯಗುರು ಎಸ್.ಎಸ್.ಪಡಶೆಟ್ಟಿ (ಮೊ: 9019035174), ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ (ಮೊ: 8277933420), ಎಂಜಿನಿಯರ್ ರಾಜಕುಮಾರ ಪತ್ತಾರ (9880983451), ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ಸಿ.ಎಸ್.ಮೆಟಿ (900220445), ಸಿ.ಆರ್.ಪಿ ಬಸವಣ್ಣಗೌಡ (9972350360), ಪ್ರಾಚಾರ್ಯ ಎಸ್.ಎಂ.ಬಿರಾದಾರ (9739053795), ವಿಠಲ ಚವಾಣ್‌, ಮುಖ್ಯಗುರು ಯಾಳಗಿ (9972611397), ಕೆ.ಆರ್. ಪಾಟೀಲ (9980584800), ಮೈನುದ್ದಿಸಾ ಎಂಜಿನಿಯರ್ (9448390339), ಶರಣಪ್ಪ ಎಂಜಿನಿಯರ್( 9901237389), ಕ್ಷೇತ್ರ ಸಮನ್ವಯ ಅಧಿಕಾರಿ ಸಿದ್ದಣ್ಣ ಮಾನಸೂಣಗಿ (9480695227), ಕಾಂಚನ (8951898867), ನಿತಿನ ಪಾಟೀಲ ಎಂಜಿನಿಯರ್ (9449291494) ಅವರನ್ನು ಒಳಗೊಂಡ ತಂಡ ರಚಿಸಲಾಗಿದೆ’ ಎಂದು ವಿವರಿಸಿದರು.8 ಸಂಚಾರಿ ಕಣ್ಗಾವಲು ತಂಡ, ಸ್ಥಾಯಿ ಕಣ್ಗಾವಲು 5 ಅಧಿಕಾರಿ ತಂಡ, ವಿಡಿಯೋ ತಂಡದಲ್ಲಿ 5 ತಂಡ ರಚಿಸಲಾಗಿದೆ ಎಂದರು.‘ಕ್ಷೇತ್ರದಲ್ಲಿ ಭಾವಚಿತ್ರ ಇರುವ ಗುರುತಿನ ಚೀಟಿ ಮತದಾರರ ಸಂಖ್ಯೆಯ ಶೇ 99.46ರಷ್ಟು ಹೊಂದಿದ್ದೇವೆ. ಅಲ್ಲದೆ ಚುನಾವಣೆ ಸಹಾಯವಾಣಿ ಕೇಂದ್ರವನ್ನು (08479–240272) ಸ್ಥಾಪಿಸಲಾಗಿದೆ. 24X7 ಕೆಲಸ ನಿರ್ವಹಿಸಲಿದೆ.ಆರು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ’ ಎಂದರು.

‘ಪ್ರಥಮ ಬಾರಿಗೆ ಕ್ಷೇತ್ರದ ಒಂದು ಮತಗಟ್ಟೆಯಲ್ಲಿಯೇ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಯನ್ನು ಸ್ಥಾಪಿಸುವಂತೆ ಚುನಾವಣೆ ಆಯೋಗ ಸೂಚಿಸಿದೆ.ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯ ನಡೆಸಲಾಗುವುದು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಸುಬಣ್ಣ ಜಮಖಂಡಿ ಇದ್ದರು.

ADVERTISEMENT

ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ

ಶಹಾಪುರ ಮತಕ್ಷೇತ್ರದಲ್ಲಿ ಕಳೆದ 10 ವರ್ಷದಿಂದ ವಿವಿಧ ಇಲಾಖೆಯ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು, ಅದೇ ಅಧಿಕಾರಿಗಳನ್ನು ಚುನಾವಣೆಯ ಕರ್ತವ್ಯದ ಮೇಲೆ ನಿಯೋಜಿಸಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸೊಮವಾರ ಪ್ರಕಟವಾದ ವರದಿಗೆ ಸಂಬಂಧಿಸಿದಂತೆ ಇದರ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿರುವೆ ಎಂದು ಚುನಾವಣಾ ನವೀನ್‌ ಜೋಸೆಫ್ ತಿಳಿಸಿದರು.

**

ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಹಕಾರ ನೀಡಬೇಕು – ನವೀನ್‌ ಜೊಸೆಫ್,ಚುನಾವಣಾ ಅಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.