ADVERTISEMENT

ಪ್ರಕರಣ ವಿಲೇವಾರಿಗೆ ಸಹಕಾರ ಅಗತ್ಯ

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಹನುಮಂತರಾವ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 29 ಮೇ 2018, 10:28 IST
Last Updated 29 ಮೇ 2018, 10:28 IST

ಶಹಾಪುರ: ಯಾವುದೇ ಪ್ರಕರಣ ವನ್ನು ಇತ್ಯಾರ್ಥಗೊಳಿಸಲು ವಕೀಲರ ಸಹಕಾರ ಅಗತ್ಯವಾಗಿದೆ. ಇದರಿಂದ ತ್ವರಿತ ನ್ಯಾಯದಾನಕ್ಕೂ ಸಹಕಾರಿಯಾಗುತ್ತದೆ ಎಂದು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಹನುಮಂತರಾವ ಕುಲಕರ್ಣಿ ಹೇಳಿದರು.

ಇಲ್ಲಿನ ವಕೀಲರ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ಮೂರು ವರ್ಷ ಬಂಟ್ವಾಳದಲ್ಲಿ ಸೇವೆ ಸಲ್ಲಿಸಿ ಇಲ್ಲಿಗೆ ಬಂದಿರುವೆ. ಇಲ್ಲಿನ ವಕೀಲರ ಸಂಘದ ಹಾಗೂ ಸಿಬ್ಬಂದಿಯ ಸಹಕಾರ ಮುಖ್ಯ. ಉತ್ತಮ ನ್ಯಾಯದಾನಕ್ಕೆ ಉತ್ತಮ ವಾತಾವರಣವಿದೆ ಎಂದರು.

ADVERTISEMENT

ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶ ಪ್ರಭು ಎನ್.ಬಡಿಗೇರ ಮಾತನಾಡಿ, ‘ನ್ಯಾಯಾಲಯದಲ್ಲಿ ಉತ್ತಮ ಪರಿಸರವಿದೆ. ಯುವ ವಕೀಲರು ನಿರಂತರವಾಗಿ ಅಧ್ಯಯನ ಮಾಡಬೇಕು. ಹಿರಿಯ ವಕೀಲರ ಮಾರ್ಗದರ್ಶನ ಪಡೆಯಬೇಕು. ನ್ಯಾಯಾಲಯದಲ್ಲಿ ಕಲಾಪ ನಡೆದಾಗ ಶಿಸ್ತು, ಸಂಯಮ, ಹಿರಿಯ ವಕೀಲರು ವಾದ ಮಂಡಿಸುವ ಪರಿಯನ್ನು ಯುವ ವಕೀಲರು ಆಲಿಸಬೇಕು’ ಎಂಬ ಸಲಹೆ ನೀಡಿದರು.

ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ, ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ, ಕಾರ್ಯದರ್ಶಿ ಹೇಮರಡ್ಡಿಕೊಂಗಂಡಿ ಹಾಗೂ ಹಿರಿಯ ವಕೀಲರಾದ ಎಸ್‌.ಶೇಖರ, ಶ್ರೀನಿವಾಸರಾವ ಕುಲಕರ್ಣಿ, ಭಾಸ್ಕರರಾವ ಮುಡಬೂಳ, ಆರ್.ಎಂ.ಹೊನ್ನಾರಡ್ಡಿ, ಶಾಂತಗೌಡ ಪಾಟೀಲ್, ಸಾಲೋಮನ್ ಆಲ್‌ಫ್ರೇಡ್, ಯೂಸೂಫ್ ಸಿದ್ದಕಿ, ಸಂತೋಷ ಸತ್ಯಂಪೇಟೆ, ಎಲ್.ಎಸ್‌.ಕುಲಕರ್ಣಿ, ವಿಶ್ವನಾಥ ಫಿರಂಗಿ, ದೇವರಾಜ ಚೆಟ್ಟಿ, ಶ್ರೀಮಂತ ಕಂಚಿ, ಮಲ್ಲಿಕಾರ್ಜುನ ಬುಕ್ಕಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.