ADVERTISEMENT

ಬಾಲ್ಯ ವಿವಾಹ ಪದ್ಧತಿ ತಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 8:25 IST
Last Updated 8 ಮಾರ್ಚ್ 2012, 8:25 IST
ಬಾಲ್ಯ ವಿವಾಹ ಪದ್ಧತಿ ತಡೆಗೆ ಆಗ್ರಹಿಸಿ ಪ್ರತಿಭಟನೆ
ಬಾಲ್ಯ ವಿವಾಹ ಪದ್ಧತಿ ತಡೆಗೆ ಆಗ್ರಹಿಸಿ ಪ್ರತಿಭಟನೆ   

ಶಹಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ದಲಿತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ನಿಜವಾದ ದಲಿತ ಫಲಾನುಭವಿಗಳಿಗೆ ಇಂದಿಗೂ ಸೂರು ಇಲ್ಲ. ಸಮರ್ಪಕವಾಗಿ ಕುಡಿಯುವ ನೀರಿನಿಂದಲೂ ವಂಚಿತರಾಗಿದ್ದಾರೆ. ಬಾಲ್ಯ ವಿವಾಹ ಅನಿಷ್ಟ ಪದ್ಧತಿಯನ್ನು ತಡೆಗೆ ಆಗ್ರಹಿಸಿ  ಪಟ್ಟಣದ ಬಸವೇಶ್ವರ ವೃತ್ತ ಬಳಿ ಮಂಗಳವಾರ ತಾಲ್ಲೂಕು ಸಿಪಿಐ (ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಳ್ಳಿಗಳಲ್ಲಿ ಇಂದಿಗೂ ಸಾಮಾಜಿಕ ಪಿಡುಗಿನಂತೆ ಕಾಡುತ್ತಿರುವ ಅಸ್ಪಶ್ರ್ಯತೆ ಹಾಗೂ ಜೀತ ಪದ್ಧತಿಯಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧ ಮುಂದುರೆದಿದೆ. ಪ್ರಾಣಿ ಬಲಿ ಹಾಗೂ ಬಾಲ್ಯ ವಿವಾಹ ಶೋಷಣೆ ತಡೆಗಟ್ಟಬೇಕೆಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ಆಗ್ರಹಿಸಿದರು.

ದಲಿತರು ಸಾಗುವಳಿ ಮಾಡಿದ ಸರ್ಕಾರಿ ಗೈರಾಣ ಜಮೀನು ಕಿತ್ತುಕೊಳ್ಳದೆ ಅವರಿಗೆ ಸಾಗುವಳಿ ಚೀಟಿ ನೀಡಬೇಕು. ಪರಿಶಿಷ್ಟರಿಗೆ ಪ್ರತ್ಯೇಕ ಅನುದಾನ ಬಜೆಟ್‌ನಲ್ಲಿ ಬಿಡುಗಡೆ ಮಾಡಬೇಕು.ಅಂಬೇಡ್ಕರ ಅಭಿವೃದ್ಧಿ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ತಡೆಗಟ್ಟಬೇಕು. ದಲಿತರ ಹೆಸರಿನಲ್ಲಿ ವಂಚನೆ ಮಾಡುವ ದಲ್ಲಾಳಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ.

ನಿವೇಶನರಹಿತ ದಲಿತರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು.ಭೂರಹಿತ ದಲಿತರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಸಹಾಯಧನ ನೀಡಿ. ಪುರಸಭೆ ಸಿಬ್ಬಂದಿ ದಲಿತ ಕಾರ್ಮಿಕರನ್ನು ಕಿತ್ತು ಹಾಕಿರುವುದನ್ನು ತಕ್ಷಣ ರದ್ದುಪಡಿಸಿ ಕೆಲಸದಲ್ಲಿ ಖಾಯಂಗೊಳಿಸಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.
 
ಸಮಿತಿ ಮುಖಂಡರಾದ ದಾವಲಸಾಬ ನದಾಫ್, ಸಿದ್ದಯ್ಯ ಹಿರೇಮಠ, ಮಲ್ಲಯ್ಯ ಪೊಲ್ಲಂಪಲ್ಲಿ, ಹೈಯ್ಯಾಳಪ್ಪ ಹೈಯ್ಯಾಳಕರ್, ದಲಿತ ಮುಖಂಡ ನಾಗಣ್ಣ ಬಡಿಗೇರ, ಬಸವರಾಜ ಗುತ್ತಿಪೇಟ, ಮಲ್ಲೇಶಿ ಬೇವಿನಹಳ್ಳಿ, ನಿಂಗಣ್ಣ ಶೆಟ್ಟಿಕೇರಿ, ಹೊನ್ನಪ್ಪ, ರಾಘವೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.