ADVERTISEMENT

ಮೇರಿ ಮಾತೆ ವಾರ್ಷಿಕ ಹಬ್ಬ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 9:52 IST
Last Updated 10 ಅಕ್ಟೋಬರ್ 2017, 9:52 IST
ಸುರಪುರದ ಕ್ಯಾಥೋಲಿಕ್ ಚರ್ಚ್‌ನಲ್ಲಿ ಭಾನುವಾರ ಜಪಮಾಲೆ ಮಾತೆಯ ವಾರ್ಷಿಕ ಹಬ್ಬ ಆಚರಿಸಲಾಯಿತು
ಸುರಪುರದ ಕ್ಯಾಥೋಲಿಕ್ ಚರ್ಚ್‌ನಲ್ಲಿ ಭಾನುವಾರ ಜಪಮಾಲೆ ಮಾತೆಯ ವಾರ್ಷಿಕ ಹಬ್ಬ ಆಚರಿಸಲಾಯಿತು   

ಸುರಪುರ: ಇಲ್ಲಿಯ ಕ್ಯಾಥೋಲಿಕ್ ಚರ್ಚ್‌ನಲ್ಲಿ ಭಾನುವಾರ ಜಪಮಾಲೆ ಮೇರಿ ಮಾತೆಯ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಅಂಗವಾಗಿ ಚರ್ಚ್‌ನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಕಲಬುರ್ಗಿ ವಲಯದ ಮುಖ್ಯಸ್ಥ ಫಾದರ್ ಸ್ಟೇನಿ ಗೋವಿಯಸ್ ಪೂಜೆ ಅರ್ಪಿಸಿದರು. ಫಾದರ್ ಅನಿಲ್ ಪ್ರಸಾದ್ ದೇವರ ವಾಕ್ಯ ಬೋಧಿಸಿದರು. ಫಾದರ್‌ ಗಳಾದ ವಿನ್ಸೆಂಟ್, ಬಾಪು, ಜೋಲಿ, ಜೋಶಿ, ಪ್ರೇಡ್ರಿಕ್, ಫಾವೊಸ್ತೀನ್, ಡೇವಿಡ್, ಸಾಗರ್, ಸಿಸ್ಟರ್‌ ಗಳಾದ ಐರಿನ್, ಬೆನಿಟಾ, ವೆರೊನಿಕಾ, ಸರಿತಾ, ಅಶ್ವಿತಾ, ಸುನಿತಾ, ಹೆಲೆನ್ ಪಾಲ್ಗೊಂಡಿದ್ದರು.

‘ಮಾತೆ ಮರಿಯಳು ದೇವರ ಸುಸಂದೇಶಕ್ಕೆ ಇಗೋ, ನಾನು ದೇವರ ದಾಸಿ. ನೀವು ಹೇಳಿದಂತೆ ನನಗಾಗಲಿ ಎಂದು ತಲೆಬಾಗಿ ವಿಧೇಯರಾದಂತೆ, ನಾವು ಕೂಡ ದೇವರಿಗೆ, ಅವರ ವಾರ್ತೆಗೆ ವಿಧೇಯರಾಗಲು ಈ ಹಬ್ಬ ನಮಗೆ ಕರೆ ನೀಡುತ್ತದೆ’ ಎಂದು ಧರ್ಮ ಗುರುಗಳು ತಿಳಿಸಿದರು.

ADVERTISEMENT

ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಿರುವ ಸಿಸ್ಟರ್ ಜೆಸ್ಸಿ ಸಲ್ಡಾನ ಅವರನ್ನು ಸನ್ಮಾನಿಸಲಾಯಿತು. ಜಪಮಾಲೆ ಚರ್ಚ್‌ನ ಉಪಾಧ್ಯಕ್ಷ ರಾಯಪ್ಪ ಕೆ., ಧರ್ಮಗುರು ಫಾದರ್ ಸ್ವೀವನ್ ಪ್ರಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.