ADVERTISEMENT

ವೀರಭೂಮಿ ಸ್ಮಾರಕಕ್ಕೆ ಪ್ರಸ್ತಾವನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 7:10 IST
Last Updated 12 ಫೆಬ್ರುವರಿ 2011, 7:10 IST

ಶಹಾಪುರ: ಸುರಪುರ ತಾಲ್ಲೂಕಿನ ರುಕ್ಮಾಪುರ ಗ್ರಾಮದ ಬಳಿಯ ಕ್ಯಾಪ್ಟನ್ ನ್ಯೂಬರಿ ಸಮಾಧಿಯ ಆವರಣದಲ್ಲಿ ಅಂದಾಜು 58.76 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಕ್ಷೇತ್ರ ವೀರಭೂಮಿ ಯೋಜನೆ ಅಭಿವೃದ್ಧಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಭೀಮರಾಯನಗುಡಿ ಸುರಪುರ ಸಂಶೋಧನಾ ಕೇಂದ್ರಕ್ಕೆ ಪತ್ರ ಬರೆದು ತಿಳಿಸಿದ್ದಾರೆ.

ವೀರಭೂಮಿ ಸ್ಮಾರಕ ಯೋಜ ನೆಯ ಮುಖ್ಯ ಉದ್ದೇಶವೆಂದರೆ ಪ್ರಥಮ ಸ್ವಾತಂತ್ರ್ಯದ ಬಗ್ಗೆ ಜನತೆ ಯಲ್ಲಿ ಅರಿವು ಮೂಡಿಸುವುದು. ಹೈದರಾಬಾದ ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಏಕೀಕ ರಣ ಚಳವಳಿ ಮಹತ್ವ, ಸುರಪುರ ಸಂಸ್ಥಾನ ಮಹತ್ವದ ಇತಿಹಾಸದ ಜೊತೆಗೆ ರಕ್ಷಣೆ ಮಾಡುವುದು ಅಗತ್ಯವಾಗಿದೆ ಎನ್ನುತ್ತಾರೆ ಸಂಶೋ ಧನಾ ಕೇಂದ್ರದ ಸಂಚಾಲಕ ಭಾಸ್ಕರ ರಾವ್ ಮುಡಬೂಳ.

ಯೋಜನೆ ವಿವರ: ಕ್ಯಾಪ್ಟನ್ ನ್ಯೂಬರಿ ಸಮಾಧಿ. ಅದರ ಪಕ್ಕದಲ್ಲಿ ಬ್ರಿಟಿಷರು ಕಟ್ಟಿದರೆನ್ನಲಾದ ಗ್ಯಾರಸನ್. ಬ್ರಿಟಿಷ್ ಅಧಿಕಾರಿಗಳು ವಾಸಸ್ಥಳದ ಅವಶೇಷಗಳನ್ನು ಪುನರು ದ್ಧಾರ ಮಾಡುವುದು. ಹಾಳು ಬಿದ್ದ ಕಟ್ಟಡಕ್ಕೆ ಮೇಲ್ಛಾವಣಿ ಒದಗಿಸು ವುದು. ಪ್ರವಾಸಿಗರಿಗೆ ಅನುಕೂಲ ವಾಗುವ ಉದ್ದೇಶದಿಂದ ಕಲ್ಲಿನ ಹಾಸು ನಿರ್ಮಿಸುವುದು.ಅದರ ಸುತ್ತಮುತ್ತಲು ದೀರ್ಘಕಾಲ ಬಾಳುವ ಗಿಡಗಳನ್ನು ನೆಡುವುದು. ಗ್ರಂಥಾಲಯ, ವಸ್ತು ಸಂಗ್ರಹಾಲಯ ಕಟ್ಟುವ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಯೊಬ್ಬರು. ಪ್ರೇಕ್ಷಣಿಯ ಸ್ಥಳವಾಗಿ ಅಭಿವೃದ್ಧಿ ಪಡಿಸಿ ಶಾಲಾ ಮಕ್ಕಳನ್ನು ಕರೆತರ ಬೇಕು. ಕುಡಿಯುವ ನೀರು, ರಸ್ತೆ, ವಿಶ್ರಾಂತಿ ಹೀಗೆ ಮೂಲಸೌಲಭ್ಯ ಗಳನ್ನು ಒದಗಿಸುವುದು ಅವಶ್ಯಕ ವಾಗಿದೆ ಎನ್ನುತ್ತಾರೆ ರುಕ್ಮಾಪೂರದ ಗ್ರಾಮ ಸುಧಾರಣ ಸಮಿತಿ ಸಂಚಾ ಲಕರಾದ ನಿವೃತ್ತ ಎಸ್ಪಿ ಸಿ.ಎನ್. ಭಂಡಾರಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.