ADVERTISEMENT

ಶಾಖಾಭೇದ ಮರೆತು ಸಂಘಟಿತರಾಗೋಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:15 IST
Last Updated 21 ಸೆಪ್ಟೆಂಬರ್ 2011, 9:15 IST

ಸುರಪುರ: `ವಿಪ್ರರು ಬುದ್ಧಿವಂತರಾದರೂ ಸಂಘಟನೆಯಲ್ಲಿ ಕೊರತೆ ಅನುಭವಿಸುತ್ತಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 3 ರಷ್ಟು ಇರುವ ವಿಪ್ರರು ನಿಜವಾಗಲೂ ಅಲ್ಪಸಂಖ್ಯಾತರು. ಒಕ್ಕಟ್ಟು ಇಲ್ಲದ್ದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಇತರರಿಂದ ಶೋಷಣೆಗೆ ಒಳಗಾಗಿದ್ದೇವೆ~ ಎಂದು ಪಂಚಾಂಗಕರ್ತ ಕೇದಾರನಾಥಶಾಸ್ತ್ರಿ ಯಾಳಗೀಕರ್ ಕರೆ ನೀಡಿದರು.

ತಾಲ್ಲೂಕಿನ ಶೆಳ್ಳಿಗಿಯ ಕೃಷ್ಣಾತೀರದ ಬಲಭೀಮೇಶ್ವರ ದೇವಸ್ಥಾನದ ಮಂಟಪದಲ್ಲಿ ಏರ್ಪಡಿಸಿದ್ದ ವಿಪ್ರರ ತಾಲ್ಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದರು.

ಅನಗತ್ಯ ಶಾಖಾಭೇದಗಳನ್ನು ಮರೆತು ನಾವು ಸಂಘಟಿತರಾಗಬೇಕಿದೆ. ಒಳಗಿನ ಕಚ್ಚಾಟ ನಮ್ಮನ್ನು ಹಿಂದುಳಿಯುವಂತೆ ಮಾಡಿದೆ. ಮಾನವ ಜನಾಂಗದಲ್ಲೆ ಶ್ರೇಷ್ಠ ಸಮಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಪ್ರ ಸಮಾಜದ ಸ್ಥಿತಿ ಇಂದು ದುಸ್ತರವಾಗಿದೆ.

ಸಮಾಜದ ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ಹೋಗಲಾಡಿಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಕೂಡ್ಲಿಗಿ ಉಮಾಕಾಂತ ಮಾಹಾರಾಜರು ಅಭಿಪ್ರಾಯಪಟ್ಟರು.

ರಾಮಾಚಾರ್ಯ ಜೋಶಿ ನಾಗರಾಳ, ಕಿಶನರಾವ ಹೇಜಿಬ್, ಶ್ರೀಹರಿರಾವ ಆದೋನಿ ಮಾತನಾಡಿ, ವಿಪ್ರ ಸಮಾಜ ಪ್ರಾಮಾಣಿಕವಾಗಿ ಸಂಘಟಿತರಾಗಲೇ ಬೇಕಾದ ಕಾಲ ಬಂದೊದಗಿದೆ ಎಂದರು. ಸಭೆಯಲ್ಲಿ ನೂತನ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಯಿತು. ಶಾಖಾಭೇದ ಮರೆತು ಸಂಘಟಿತರಾಗಲು ತ್ರಿಮತಸ್ಥರು ಒಪ್ಪಿಗೆ ಸೂಚಿಸಿದರು.

ಗುರುರಾಜ ಜೋಶಿ ಅಗ್ನಿ, ಭೀಮಸೇನಾಚಾರ್ಯ ಜೋಶಿ ಮಂಗಳೂರ, ಸಂಜೀವರಾವ ಕುಲಕರ್ಣಿ ಕೆಂಭಾವಿ, ಬಾಲಕೃಷ್ಣ ಸಾಲವಾಡಗಿ, ರಾಘವೇಂದ್ರ ಹಳ್ಳದ, ಧೀರೇಂದ್ರ ಕುಲಕರ್ಣಿ, ವಾಮನರಾವ ದೇಶಪಾಂಡೆ, ಗುರುರಾಜರಾವ ಕುಲಕರ್ಣಿ ಕೆಂಭಾವಿ, ಶಾಮಾಚಾರ್ಯ ಜೋಶಿ ಕೊಡೇಕಲ್, ವಿಜಯರಾಘವನ್ ಬುಕ್ಕಪಟ್ಟಣಂ ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಭವಚೈತನ್ಯ ಗುರೂಜಿ, ನರಸಿಂಗರಾವ ಕುಲಕರ್ಣಿ ಕಾಮನಟಗಿ, ಕೃಷ್ಣಾಚಾರ್ಯ ದೇವರು, ಶ್ರೀನಿವಾಸ ಏವೂರ, ಅಶೋಕ ಹೆಮನೂರ, ನಾಗರಾಜ ಯರಗುಡಿ, ಉಪೇಂದ್ರ ಜಾಗೀರದಾರ್, ತಿರುಮಲರಾವ ಅರಳಹಳ್ಳಿ, ಗುಂಡೇರಾವ ಅರಳಹಳ್ಳಿ, ಯಜ್ಞೇಶ್ವರಭಟ್, ರವಿ ಅಮ್ಮಾಪುರ, ನಿಂಗಣ್ಣಾಚಾರ್ಯ ಜೋಶಿ, ಗಣೇಶ ಜಾಗೀರದಾರ್, ಕಮಲಾಕರ ಕುಲಕರ್ಣಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.