ADVERTISEMENT

ಸಹಕಾರಿ ಸಂಘಗಳಿಂದ ಅಭಿವೃದ್ಧಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:05 IST
Last Updated 7 ಜನವರಿ 2012, 10:05 IST

ಸುರಪುರ: ಕರ್ನಾಟಕ ಸಹಕಾರಿ ಸಂಘಗಳ ಯೋಜನೆಯಡಿಯಲ್ಲಿ ಸಂಘಗಳ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಹಣಕಾಸು ನೆರವಿನ ಮೂಲಕ ಸಂಘಗಳ ಏಳಿಗೆಗೆ ಅಗತ್ಯ ಸಹಕಾರ ಸಿಗುತ್ತದೆ. ಅವುಗಳ ಸದ್ಬಳಿಕೆ ಮಾಡಿಕೊಳ್ಳುವುದು ನಿಮಗೆ ಸೇರಿದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆಂಚಣ್ಣ ನಗನೂರ ಮಾಹಿತಿ ನೀಡಿದರು.

ಬುಧವಾರ ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ವಕೀಲರ ಗೃಹ ನಿರ್ಮಾಣ ಸಂಘದ ಸಭೆಯಲ್ಲಿ ಮಾಹಿತಿ ನೀಡಿದರು.

ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ವಕೀಲರು ಮನೆಯನ್ನು ಕಟ್ಟಿಕೊಳ್ಳಲು ಕರ್ನಾಟಕ ವಸತಿ ಮಹಾಮಂಡಳದಿಂದ ಆರ್ಥಿಕ ನೆರವು ಮತ್ತು ಸಹಕಾರ ನಿಯಮದಡಿಯಲ್ಲಿ ಸಂಘದ ಭದ್ರತೆಗೂ ನೆರವು ನೀಡಲಾಗುತ್ತದೆ. ಸಂಘವನ್ನು ಚನ್ನಾಗಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ವಕೀಲರ ಸಂಘದ ಗೃಹ ನಿರ್ಮಾಣ ಸಂಘಕ್ಕೆ ಜಿ. ತಮ್ಮಣ್ಣ, ರಾಮನಗೌಡ ಸುಬೇದಾರ್, ಎಸ್. ಎಂ. ಕನಕರೆಡ್ಡಿ, ದೇವಿಂದ್ರಪ್ಪ ಬೇವಿನಕಟ್ಟಿ, ಎಸ್. ವ್ಯಾಸರಾಜ್, ಬಸವರಾಜ ಅನಸೂರ್, ವೀರಣ್ಣ ಹಳಿಸಗರ, ಪದ್ಮಜಾ ರಫುಗಾರ್, ನಂದನಗೌಡ ಪಾಟೀಲ, ಸಿ. ವೈ. ಸಾಲಿಮನಿ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.

ಮುಂದಿನ ಸಭೆಯಲ್ಲಿ ಸಂಘದ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಹಿರಿಯ ವಕೀಲ ಜಿ. ಎಸ್. ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವಕೀಲರಾದ ಎಸ್. ಸಿದ್ರಾಮಪ್ಪ, ರಮಾನಂದ ಕವಲಿ, ಉದಯಸಿಂಗ್, ಎಂ. ಎಸ್. ಹಿರೇಮಠ, ವಿ. ಎಸ್. ಬೈಚಬಾಳ, ಮಂಜುನಾಥ ಹುದ್ದಾರ್, ಮಲ್ಲು ಬೋವಿ, ಮಲ್ಲು ಮಂಗಿಹಾಳ, ಆದಪ್ಪ ಹೊಸಮನಿ, ಸಿದ್ದಯ್ಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.