ADVERTISEMENT

ಸಹಜಾನಂದರ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:55 IST
Last Updated 5 ಫೆಬ್ರುವರಿ 2011, 8:55 IST

ಸುರಪುರ: ಆಧ್ಯಾತ್ಮ ಜ್ಞಾನದಿಂದ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಧ್ಮಾತ್ಮ ಜಾತಿ, ಭೇದ ಮೀರಿದ್ದು ಆಗಿದೆ. ಎಲ್ಲಾ ಧರ್ಮಗಳಲ್ಲೂ ಆಧ್ಮಾತ್ಮ ಚಿಂತನೆಗೆ ಅವಕಾಶವಿದೆ.ಆಧ್ಮಾತ್ಮದಿಂದ ಮಕ್ಕಳು ಉತ್ತಮ ಸಂಸ್ಕಾರ ಪಡೆಯಬಹುದಾಗಿದೆ. ಸಂಸ್ಕಾರವಿಲ್ಲದ ಮಕ್ಕಳು ನಿಷ್ಪ್ರ ಯೋಜಕರಾಗುತ್ತಾರೆ.ಭವಿಷ್ಯದ ಭಯೋತ್ಪಾದಕರಾಗುತ್ತಾರೆ ಎಂದು ಗಂವ್ಹಾರದ ಸೋಪಾನನಾಥ ಸ್ವಾಮಿಗಳು ಹೇಳಿದರು.ರಂಗಂಪೇಟೆಯ ಸಹಜಾನಂದ ಮಠದಲ್ಲಿ ಗುರುವಾರ ಸಹಜಾ ನಂದರ ವಜ್ರಮಹೋತ್ಸವ ಪುಣ್ಯಾ ರಾಧನೆಯ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿ ಆಶೀರ್ವಚನ ನೀಡುತ್ತಿದ್ದರು.

ಆಧ್ಯಾತ್ಮ ಇಲ್ಲದ ದೇಹ ಆತ್ಮವಿಲ್ಲದ ಶರೀರವಿದ್ದಂತೆ.ಭಕ್ತಿ ಜ್ಞಾನದ ಸಂಕೇತ. ಭಕ್ತಿ ಮಾರ್ಗದಿಂದ ಸನ್ಮಾರ್ಗದೆಡೆಗೆ ಪ್ರೆರೇಪಣೆಯಾಗುತ್ತದೆ.ಎಲ್ಲರೂ ದೇವ ಭಕ್ತಿ, ಗುರು ಭಕ್ತಿ, ಮಾತಾ ಪಿತೃ ಭಕ್ತಿ, ಅತಿಥಿ ಭಕ್ತಿಯನ್ನು ಅಳವಡಿಸಿಕೊಳ್ಳಬೇಕು.ಗುರುವಿನ ಮಾರ್ಗದರ್ಶನದಿಂದ ಆಧ್ಯಾತ್ಮ ಅನುಸರಿಸುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.

ಒತ್ತಡದ ಬದುಕಿನಿಂದ ನಾವು ಶಾಂತಿ, ಮಾಧಾನ ಕಳೆದುಕೊಂಡಿದ್ದೇವೆ.ಮನುಷ್ಯ ಅನಾರೋಗ್ಯಕ್ಕೆ ಈಡಾಗುತ್ತಿದ್ದಾನೆ. ನೆಮ್ಮದಿ ಸಾಧ್ಯವಾಗುತ್ತಿಲ್ಲ.ಇಂತಹ ಸತ್ಸಂಗಗಳು ನಮಗೆ ಒತ್ತಡ ಮುಕ್ತ ಜೀವನ ಕಲ್ಪಿಸುತ್ತವೆ.ಉತ್ತಮ ಆರೋಗ್ಯಕ್ಕೂ ಕಾರಣವಾಗುತ್ತವೆ. ಕಾರಣ ವಾರಕ್ಕೊಂದು ಬಾರಿಯಾದರೂ ಸತ್ಸಂಗಗಳಲ್ಲಿ ಭಾಗವಹಿಸಬೇಕೆಂದು ಮಾಜಿ ಜಿ.ಪಂ. ಉಪಾಧ್ಯಕ್ಷ ಸುರೇಶ ಸಜ್ಜನ್ ಕರೆ ನೀಡಿದರು.

ಸದ್ಗುರು ಸಹಜಾನಂದರ ಜೀವನ ಚರಿತ್ರೆ, ಅವರ ಆಧ್ಯಾತ್ಮ ಜೀವನ, ಮೋಕ್ಷ ಸಾಧನೆಯ ಬಗ್ಗೆ ಗೋಪಾಲಶಾಸ್ತ್ರಿ ಹೆಬ್ಬಾಳ ವಿವರಿಸಿದರು. ಜಗದೀಶ ಶರ್ಮಾ ಸಂತರ ಸಹವಾಸ, ಆಧ್ಯಾತ್ಮದ ಬಗ್ಗೆ ಮಾತನಾಡಿದರು.ಬೆಳಿಗ್ಗೆ ರಂಗಂಪೇಟೆಯ ಪ್ರಮುಖ ಬೀದಿಗಳಲ್ಲಿ ಸಹಜಾನಂದರ ಭಾವಚಿತ್ರದ ಆಕರ್ಷಕ ಶೋಭಾಯಾತ್ರೆ ಜರುಗಿತು. ಅಭಿಷೇಕ, ವಿಶೇಷ ಪೂಜೆ, ಗಣಹೋಮ, ಮಹಾಪ್ರಸಾದ ಏರ್ಪ ಡಿಸಲಾಗಿತ್ತು. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.