ADVERTISEMENT

ಸುಳ್ಳು ಜಾತಿ ಪ್ರಮಾಣಪತ್ರ ತಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:55 IST
Last Updated 5 ಫೆಬ್ರುವರಿ 2011, 8:55 IST

ಯಾದಗಿರಿ: ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆ ಸಲಾಯಿತು. ಸುಭಾಷ ವೃತ್ತದಿಂದ ಜಿಲ್ಲಾಧಿ ಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಸಾವಿರಾರು ಪ್ರತಿಭಟನಾಕಾರರು, ದಾರಿಯುದ್ದಕ್ಕೂ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ,ಮನವಿ ಸಲ್ಲಿಸಿದರು. ಪ್ರವರ್ಗ-1 ರಲ್ಲಿ ಬರುವ ಕಬ್ಬಲಿಗ, ಮೇದಾರ, ಪ್ರವರ್ಗ-2 ರಲ್ಲಿ ಬರುವ ಕುರುಬ ಜನಾಂಗವು ತಮ್ಮ ನಿಜ ಜಾತಿಯನ್ನು ಬಿಟ್ಟು ಟೊಕ್ಕರೆ ಕೋಳಿ, ಕಾಡು ಕುರುಬ, ಜೇನು ಕುರುಬ, ರಾಜಗೊಂಡ ಎಂದು ಜನಗಣತಿಯಲ್ಲಿ ನಮೂದಿಸಲು ಹೊರಟಿರುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಟೊಕ್ಕರೆ ಕೋಳಿ, ಕಾಡು ಕುರುಬ, ಜೇನು ಕುರುಬ, ರಾಜ ಗೊಂಡ ಎಂಬ ಜನಾಂಗಗಳು ಇಲ್ಲ. ಆದರೆ ಸರ್ಕಾರದ ಕಣ್ಣು ತಪ್ಪಿಸಿ, ಪರಿ ಶಿಷ್ಟ ಪಂಗಡದ ಸುಳ್ಳು ಪ್ರಮಾಣಪತ್ರ ಪಡೆಯಲು ಹಾಗೂ ಇನ್ನಿತರ ಸೌಲ ಭ್ಯಗಳನ್ನು ಪಡೆಯಲು ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಿಜವಾದ ಪರಿಶಿಷ್ಟ ಪಂಗಡದವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿರುವ ಇವರಿಗೆ ಜನಗಣತಿಯಲ್ಲಿ ಸುಳ್ಳು ಜಾತಿ ನಮೂದಿಸಲು ಯಾವುದೇ ರೀತಿಯಲ್ಲಿ ಅವಕಾಶ ನೀಡಬಾರದು. ಈ ಬಗ್ಗೆ ಜನಗಣತಿ ಮಾಡಲು ಹೊರಟಿರುವ ಅಧಿಕಾರಿಗಳಿಗೂ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.ಸುಳ್ಳು ಜಾತಿ ಪ್ರಮಾಣಪತ್ರ ತಡೆಗಟ್ಟಬೇಕು.

ಸರ್ಕಾರದ ಇಲಾಖೆಯಲ್ಲಿ ಕೇಂದ್ರದ ಮಾದರಿಯಂತೆ ಪರಿಶಿಷ್ಟ ಪಂಗಡದ ಮೀಸಲಾತಿಯ ಪ್ರಮಾಣಪತ್ರವು ರಾಜ್ಯದ ಎಲ್ಲ ಇಲಾಖೆಗಳಿಗೆ ಶೇ.7.5 ರಷ್ಟನ್ನು ಜಾರಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಹುದ್ದೆಯಲ್ಲಿ ಇರುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು.

ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯವರಿಗೆ ಸರ್ಕಾರಿ ಯೋಜನೆಯ ಸಾಲವನ್ನು ಸರಿಯಾಗಿ ವಿತರಿಸದ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಪಂಗಡದ ಜನರಿಗೆ ಮೂಲಸೌಲಭ್ಯ ಗಳನ್ನು ಒದಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.ಶಂಭನಗೌಡ ಪಾಟೀಲ ಕೊಡೇಕಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಸಿದ್ಧನಗೌಡ ಪಾಟೀಲ, ದಶರಥ ದೊರೆ, ನಂದ ಕುಮಾರ ಮಾಲಿಪಾಟೀಲ, ವೇಣುಗೋಪಾಲ ಜೇವರ್ಗಿ,ವೇಣುಮಾಧವ ನಾಯಕ, ವೆಂಕೋಬದೊರೆ, ಸುರೇಶ ದೊರೆ, ಗಂಗಾಧರ ನಾಯಕ, ಅಯ್ಯಪ್ಪ ನಾಯಕ, ಶಂಕರ ನಾಯಕ, ಮಾರೆಪ್ಪ ನಾಯಕ, ಚಂದ್ರಕಾಂತ ಹತ್ತಿಕುಣಿ, ರಾಜಾ ವೆಂಕಟಪ್ಪ ನಾಯಕ ವನದುರ್ಗ, ಸುದರ್ಶನ ನಾಯಕ, ನಾಗರಾಜ ಜುಗೂರ, ಟಿ.ಎನ್. ಭೀಮುನಾಯಕ, ಸುಭಾಷ ನಾಯಕ, ರಾಜಾ ರಾಮಪ್ಪ ನಾಯಕ, ರಾಜಾ ಲಕ್ಷ್ಮಿನಾರಾಯಣ ನಾಯಕ, ಅನಿಲ ಇಟ್ಟಂಗಿ, ಮಲ್ಲಣ್ಣ ಹೊಸಮನಿ, ಭೀಮರಾಯ ಮಾಸ್ತರ್, ತಿಮ್ಮಣ್ಣ, ಶಂಕ್ರಣ್ಣ ಶಿರವಾಳ, ಎಸ್.ಎ. ರಾಜು ಹವಾಲ್ದಾರ, ಶಿವರಾಜ ನಾಯಕ, ನಾಗಪ್ಪ ನಾಯಕ, ರಾಮ ನಾಯಕ, ನರಸಪ್ಪ, ಗುರುನಾಥ ಹುಲಕಲ್, ದೇವೆಂದ್ರ ಪೊಲೀಸ್‌ಪಾಟೀಲ ಸೇರಿ ದಂತೆ ಸಾವಿರಾರು ಜನರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.