ಸುರಪುರ: ನಾರಾಯಣಪುರ ಜಲಾಶಯದಿಂದ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ಮಾ.10ರಂದು ನೀರು ಸ್ಥಗಿತಗೊಳಿಸುವ ಸರ್ಕಾದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಇಲ್ಲಿನ ಗಾಂಧಿ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿತು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಾಸ ಮಾಲಿ ಪಾಟೀಲ ಮಾತನಾಡಿ, ನೀರಾವರಿ ಸಲಹಾ ಸಮಿತಿಯ ನಿರ್ಧಾರ ಅವೈಜ್ಞಾನಿಕವಾದದ್ದು. 10ಕ್ಕೆ ನೀರು ಸ್ಥಗಿತಗೊಳಿಸಿದರೆ ರೈತರು ಜಮೀನುಗಳಲ್ಲಿ ಬಿತ್ತಿದ ಹತ್ತಿ, ಶೇಂಗಾ, ಮೆಣಸಿನಕಾಯಿ ಇತರೆ ಬೆಳೆಗಳು ಹಾಳಾಗುತ್ತವೆ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, 30ರ ವರೆಗೆ ಕಾಲುವೆಗೆ ನೀರು ಹರಿಸುವ ನಿರ್ಧಾರವನ್ನು ಮಾ. 8 ರೊಳಗಾಗಿ ಪ್ರಕಟಿಸಬೇಕು. ವಿಳಂಬವಾದಲ್ಲಿ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಾಪರೆಡ್ಡಿ ಪಾಟೀಲ, ಅಯ್ಯಣ್ಣ ಹಾಲಬಾವಿ, ಲಕ್ಷ್ಮಣ ನಾಯಕ, ಸಂಗಣ್ಣ ಅಂಗಡಿ, ಚನ್ನಪ್ಪ ಗೊಬ್ಬೂರು, ಬಸವರಾಜ ಮಂಗಿಹಾಳ, ಪರಮಣ್ಣ ಮಂಗಿಹಾಳ, ತಿಪ್ಪಣ್ಣ ಚಾಗಲಿ, ಮಲ್ಲನಗೌಡ ಕಚಕನೂರು, ಯಂಕಾರೆಡ್ಡಿ, ಅಯ್ಯಣ್ಣ ಅರಳಹಳ್ಳಿ, ಮಲ್ಲಣ್ಣ ದಿವಾನ್, ರಾಘವೇಂದ್ರ ದಿವಾನ್, ಮಹಾಲಿಂಗಪ್ಪ ತಳಗೇರಿ, ಪ್ರತಾಪಗೌಡ, ಸಿದ್ದನಗೌಡ ಹೆಬ್ಬಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.