ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ ಮತ್ತೆ 49 ಕೋವಿಡ್ ಪ್ರಕರಣಗಳು ದೃಢವಾಗಿವೆ. ಇದರಿಂದ ಸೋಂಕಿತರ ಸಂಖ್ಯೆ1,501ಕ್ಕೆ ಏರಿಕೆಯಾಗಿದೆ. ಹಲವಾರು ಜನ ಸೋಂಕಿತರು ಪ್ರಯಾಣದಇತಿಹಾಸವೇ ಹೊಂದಿಲ್ಲ. ಇನ್ನು ಕೆಲವರು ತೆಲಾಂಗಣ, ಮಹಾರಾಷ್ಟ್ರದಿಂದಬಂದಿದ್ದಾರೆ.
ಪೊಲೀಸರಿಗೂತಗುಲಿದ ಕೋವಿಡ್:
ಡಿ.ಆರ್.ಪೊಲೀಸ್, ವಸತಿಗೃಹ, ಗ್ರಾಮೀಣ, ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಶಹಾಪುರ ಬಸ್ ಡಿಪೋ, ಸೈದಾಪುರ ಬಸ್ ನಿಲ್ದಾಣ, ವನಕೇರಿ ಬಡಾವಣೆ, ಮಡ್ನಾಳ ಕ್ಯಾಂಪ್ ನಿವಾಸಿಗಳು ಸೇರಿದಂತೆ 49 ಜನರಲ್ಲಿ ಕೋವಿಡ್ ಪತ್ತೆಯಾಗಿದೆ.
ಬುಧವಾರ 47ಜನ ಸೋಂಕುನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲಾಸ್ಪತ್ರೆಯಿಂದ 32, ಶಹಾಪುರ ಕೋವಿಡ್ ಕೇರ್ ಸೆಂಟರ್‌ನಿಂದ 15 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಇದರಿಂದ 1,097 ಗುಣಮುಖರಾದಂತೆ ಆಗಿದೆ. 402 ಸಕ್ರಿಯ ಪ್ರಕರಣಗಳು ಇವೆ. ಪ್ರಾಥಮಿಕ ಸಂಪರ್ಕದಲ್ಲಿದ್ದ 91, ದ್ವಿತೀಯ ಸಂಪರ್ಕದಲ್ಲಿದ್ದ 135 ಜನರನ್ನು ಬುಧವಾರಪತ್ತೆಹಚ್ಚಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.